ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಂಚೌಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಲ್ಲಿ ಜೀವ ತೆತ್ತವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಇಂದು ಚಂಡಮಾರುತವು ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗಕ್ಕೆ ಚಲಿಸಿದೆ, ಇದು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಾಪಟ್ಲಾದಿಂದ ಸುಮಾರು 100ಕಿ.ಮೀ ಉತ್ತರ ವಾಯುವ್ಯ ಮತ್ತು ಖಮ್ಮಮ್‌ನಿಂದ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿ ಚಂಡಮಾರುತ ಇಳಿಕೆಯಾಗಿದೆ. ಇನ್ನು 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಹೇಳಲಾಗಿದೆ.
Scenes after 2 days in that pallikaranai apartment. #Pallikaranai #ChennaiFloods pic.twitter.com/hiDeDF6vNW
— Tony Soprano (@brba_4ever) December 4, 2023
ತಮಿಳುನಾಡಿನಲ್ಲಿ ಚಂಡಮಾರುತದಿಂದಾಗಿ 17 ಮಂದಿ ಮೃತಪಟ್ಟಿದ್ದಾರೆ ಅದರಲ್ಲಿ ಆರು ಮಂದಿ ಗ್ರೇಟರ್ ಚೆನ್ನೈನವರಾಗಿದ್ದಾರೆ. ಚೆನ್ನೈನಲ್ಲಿಯೂ ಆಸ್ತಿಪಾಸ್ತಿ ಹಾನಿಯಾಗಿದೆ, ಜೊತೆಗೆ ರಾಜ್ಯಾದ್ಯಂತ ರೈತರ ಬೆಳೆಗಳು ನಷ್ಟವಾಗಿವೆ. ಚಂಡಮಾರುತದಿಂದಾದ ಹಾನಿಯನ್ನು ಗುರುತಿಸಲು ಭಾರತೀಯ ವಾಯುಪಡೆ ಸಮೀಕ್ಷೆ ನಡೆಸುತ್ತಿದೆ.
Dear toxic left-leaning Dravidoids,
NDRF rescuers arrive, most are Hindi speaking. So stop peddling this North Indians Vs South Indians divide. Humanity thrives not your Hindi – North Indian hate#CycloneMichuang #ChennaiRain #ChennaiFloods— Venkat Ramakrishna Iyer 🟧 (@vrishahi) December 5, 2023