ನಾವು ತಿನ್ನುವ ಆಹಾರವೇ ನಮ್ಮ ಆರೋಗ್ಯದ ಪ್ರತಿಬಿಂಬ. ಆದರೆ ಏನು ತಿನ್ನುತ್ತೇವೆ ಅನ್ನೋದಕ್ಕಿಂತ, ಹೇಗೆ ತಿನ್ನುತ್ತೇವೆ ಅನ್ನೋದಕ್ಕೆ ಹೆಚ್ಚಿನ ಮಹತ್ವ ಇದೆ. ಸರಿಯಾದ ಆಹಾರ ಪದ್ಧತಿ ನಮ್ಮ ದೇಹದ ತೂಕ, ಫಿಟ್ನೆಸ್ ಮತ್ತು ಮಾನಸಿಕ ಆರೋಗ್ಯಕ್ಕೂ ನೇರವಾಗಿ ಸಂಬಂಧಿಸಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಊಟ ಮಾಡುವುದರಿಂದ ದೀರ್ಘಕಾಲಿಕ ಆರೋಗ್ಯವನ್ನು ಕಾಪಾಡಬಹುದು.
ಊಟದ ವೇಳೆ ಗಮನ ಕೊಡಬೇಕಾದ ಪ್ರಮುಖ ಅಂಶಗಳು
ಮೊಬೈಲ್‌ನ್ನು ಬದಿಗಿಟ್ಟು ಊಟ ಮಾಡಿ
ಇತ್ತೀಚಿನ ದಿನಗಳಲ್ಲಿ ಊಟ ಮಾಡುವಾಗ ಮೊಬೈಲ್ ಅಥವಾ ಟಿವಿ ನೋಡುವುದು ಸಾಮಾನ್ಯವಾಗಿದೆ. ಆದರೆ ತಜ್ಞರ ಪ್ರಕಾರ ಇದು ಆರೋಗ್ಯಕ್ಕೆ ಹಾನಿಕಾರಕ. ಆಹಾರವನ್ನು ಗಮನದಿಂದ ತಿಂದರೆ ಅದು ಸರಿಯಾಗಿ ಜೀರ್ಣವಾಗುತ್ತದೆ.

ಹಸಿವು ಆದಾಗ ಮಾತ್ರ ತಿನ್ನಿ
ಹಸಿವು ಆಗದೆ ಊಟ ಮಾಡುವ ಪದ್ಧತಿ ತಪ್ಪು. ದೇಹಕ್ಕೆ ಅಗತ್ಯವಾದಾಗ ಮಾತ್ರ ಆಹಾರ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸರಿಯಾಗಿರುತ್ತದೆ.
ಒಟ್ಟಾಗಿ ಕೂತು ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
ಕುಟುಂಬದೊಂದಿಗೆ ಕೂತು ಊಟ ಮಾಡುವುದರಿಂದ ಮನಸ್ಸಿಗೆ ಧನಾತ್ಮಕ ಶಕ್ತಿ ಸಿಗುತ್ತದೆ. ಒಟ್ಟಾಗಿ ತಿನ್ನುವುದರಿಂದ ಆತ್ಮೀಯತೆ ಹೆಚ್ಚುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಅಗಿದು ಜಗಿದು ತಿನ್ನಿ
ಆಹಾರವನ್ನು ನಿಧಾನವಾಗಿ ಅಗಿದು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಲಭಿಸುತ್ತವೆ. ಗಡಿಬಿಡಿಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆ ಅಸಮರ್ಪಕವಾಗಬಹುದು.
ಊಟ ಮಾಡುವಾಗ ಮಾತನಾಡುವುದನ್ನು ತಪ್ಪಿಸಿ
ಆಹಾರ ಸೇವನೆಯ ಸಮಯದಲ್ಲಿ ಹೆಚ್ಚು ಮಾತನಾಡುವುದರಿಂದ ದೇಹಕ್ಕೆ ತೊಂದರೆ ಉಂಟಾಗಬಹುದು. ಊಟದ ಮೇಲೆ ಮಾತ್ರ ಗಮನ ಕೊಡುವುದು ಆರೋಗ್ಯಕ್ಕೆ ಲಾಭಕಾರಿ.
