ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಿನಿ ಹರಾಜು ಪ್ರಕ್ರಿಯೆ ಇಂದು ಆರಂಭವಾಗಲಿದೆ.
ದುಬೈನ ಕೋಕ ಕೋಲಾ ಅರೆನಾದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟಾರೆ ಮಿನಿ ಹರಾಜಿಗೆ 333 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಇದರಲ್ಲಿ 214 ಭಾರತೀಯ ಆಟಗಾರರು ಇದ್ದಾರೆ.
ಒಟ್ಟಾರೆ 10 ಫ್ರಾಂಚೈಸಿಗಳು ತಮ್ಮ ತಂಡವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ಉತ್ತಮ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ.
ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿ ಇದೆ?