ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ತನಿಖೆ ಆಗಬೇಕು ಅಂತಾ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂದ್ರಹಳ್ಳಿ ಪ್ರಕರಣದ ಬಗ್ಗೆ ಶಿಕ್ಷಣ ಸಚಿವರ (Education Minister) ಗಮನಕ್ಕೆ ತರುತ್ತೇನೆ. ಖಂಡಿತವಾಗಿ ಈ ರೀತಿ ನಡೆಯಬಾರದು . ಮಕ್ಕಳನ್ನ ಈ ರೀತಿಯ ಕೆಲಸಗಳಿಗೆ ಬಳಸಿಕೊಳ್ಳಬಾರದು. ಶಿಕ್ಷಣ ಇಲಾಖೆ ಜನರಲ್ ಆಗಿ ಸುತ್ತೋಲೆ ಹೊರಡಿಸಬೇಕು ಅಂತಾ ಸಲಹೆ ಕೊಟ್ಟರು. ಅಲ್ಲದೆ ಯಾವ ಉಪಾಧ್ಯಾಯರು ಮಕ್ಕಳ ಬಳಿ ಈ ಕೆಲಸ ಮಾಡಿಸಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲು ನಾನು ಸೂಚಿಸುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್ (Toilet Clean) ಮಾಡಿಸಿದ್ದರು. 6 ನೇ ತರಗತಿ ವಿದ್ಯಾರ್ಥಿಗಳು ಆಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದರು. ಈ ವಿಚಾರ ಪೋಷಕರಿಗೆ ಗೊತ್ತಾಗಿ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಮುಖ್ಯ ಶಿಕ್ಷಕಿ ಅಮಾನತು: ಸದ್ಯ ಪ್ರಕರಣ ಸಂಬಂಧ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.