ಹೊಸದಿಗಂತ ವರದಿ ಯಾದಗಿರಿ:
ಕೆಕೆಆರ್ ಡಿಬಿಯ ಆರೋಗ್ಯ ಆವಿಷ್ಕಾರ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಶನಿವಾರ ಬೆಳ್ಳಂ ಬೆಳಗ್ಗೆ ನಗರದ ಹೃದಯ ಭಾಗದಲ್ಲಿನ ಐತಿಹಾಸಿಕ ಕೋಟೆಗೆ ಭೇಟಿ ನೀಡಿದರು.
ಬೆಳಗ್ಗೆ ಜಾಗಿಂಗ್ ಗಾಗಿ ಕೋಟೆಯನ್ನು ಪ್ರದಕ್ಷಣೆ ಹಾಕಿದ ಸಚಿವರು, ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರು ಕೋಟೆಯನ್ನಾಳಿದ ಇತಿಹಾಸ ಅರಿತುಕೊಂಡರು. ಅಲ್ಲದೆ, ಬೆಟ್ಡದ ಮೇಲಿರುವ ತಾಯಿ ಭುವನೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ಕೆಳಗಡೆ ಇರುವ ಅಕ್ಕ-ತಂಗಿ ಬಾವಿ, ತೋಪುಗಳನ್ನು ವೀಕ್ಷಿಸಿ ಸಂತಸಪಟ್ಟರು.
ಸಚಿವರಿಗೆ ಕಾಂಗ್ರೆಸ್ ಯುವ ನಾಯಕರಾದ ಪಂಪನಗೌಡ ( ಸನ್ನಿ) ತುನ್ನೂರ, ಅನೀಲ ಕುಮಾರ ಹೆಡಗಿಮದ್ರಾ ಸಾಥ್ ನೀಡಿದರು.