ಹೊಸದಿಗಂತ ವರದಿ, ಕಲಬುರಗಿ:
ಕನಾ೯ಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಒಂದು ಮನೆ, ಎರಡು ಬಾಗಿಲು ಇದ್ದಂಗೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿದ್ದಾರೆ.
ಭಾನುವಾರ ನಗರದ ಐವನ್ ಎ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಇದ್ದಾರೆ. ರಾಹುಲ್ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಾಣುತ್ತಿದೆ. ಕನಾ೯ಟಕದಲ್ಲೂ ಸಹ ಜನರು ಕಾಂಗ್ರೆಸ್ ಪಕ್ಷವನ್ನು ಒಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುವ ಕೆಲಸ, ಗೋ ಹತ್ಯೆ ಮಾಡಿದವರಿಗೆ ರಕ್ಷಣೆ ನೀಡುವ ಕೆಲಸ ಮಾಡಿದ ಬೆನ್ನಲ್ಲೇ, ಜನರು ಕನಾ೯ಟಕದಿಂದ ಓಡಿಸಿದರು. ಇವರು ಇದೇ ರೀತಿಯಲ್ಲಿ ತಮ್ಮ ವತ೯ನೆಯನ್ನು ಮುಂದುವರೆಸಿದರೇ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನಿನಾ೯ಮವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಅಧಿಕೃತ ವಿರೋಧ ಪಕ್ಷದಲ್ಲು ಇರುವುದಿಲ್ಲ ಎಂದರು.
ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು, ಯೂ.ಟಿ.ಖಾದರ್ ನೇತೃತ್ವದಲ್ಲಿ ಎಲ್ಲಾ ಕಾಂಗ್ರೆಸ್,ನ ಮುಸ್ಲಿಂ ಶಾಸಕರು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರು ಹಿಜಾಬ ಗಲಾಟೆ ಗೆ ಎಸ್.ಡಿ.ಪಿ.ಐ,ಪಿ.ಎಫ್.ಐ ಕಾರಣವಾಗಿದ್ದು,ಬ್ಯಾನ್ ಮಾಡಬೇಕೆಂದು ಹೇಳಿದ್ದಾರೆ. ಆದರೆ ಡಿಕೆಶಿ ಆವರು ಗಲಭೆಗೆ ಬಿಜೆಪಿ ಮತ್ತು ಆರ್.ಎಸ್.ಎಸ್.ಕಾರಣ ಎಂದು ಹೇಳುತ್ತಾರೆ. ನಾನು ಹೇಳುತ್ತೇನೆ,ರಾಜ್ಯದಲ್ಲಿ ಗಲಭೆವಾಗುವುದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೂ-ಮುಸ್ಲಿಂ ದೂರವಾಗಬೇಕು. ಮುಸ್ಲಿಂ ಮತಗಳು ಕಾಂಗ್ರೆಸ್ ಗೆ ಬರಬೇಕು ಎಂಬ ಕುತಂತ್ರ ನಡೆಸಿ,ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಇದೇ ತರಹ ಜಾತೀ ಒಡೆಯುವುದಕ್ಕೆ ಮುಂದಾಗಿ,ಅಧಿಕಾರ ಕಳೆದಕೊಂಡರು.ಇವಾಗ ಹಿಜಾಬ್ ವಿಚಾರದಲ್ಲಿ ಹಿಂದೂ ಮುಸ್ಲಿಂ ವಿಚಾರದಲ್ಲಿ ಗದ್ದಲವೆಬ್ಬಿಸಿ,ನಿನಾ೯ಮವಾಗಲು ಹೊರಟಿದ್ದಾರೆ ಎಂದು ಹೇಳಿದರು.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ಕಾಂಗ್ರೆಸ್: ರಾಷ್ಟ್ರಧ್ವಜಕ್ಕೆ ಮೊದಲು ಆಪಮಾನ ಮಾಡಿದವರೇ ಡಿಕೆಸಿ. ಸದನದಲ್ಲಿ ಎರಡನೇ ಬಾರಿ ರಾಷ್ಟ್ರಧ್ವಜವನ್ನು ಹಿಡಿದು ಅಪಮಾನ ಮಾಡಿದರು.ಹೀಗಾಗಿ ರಾಷ್ಟ್ರ ಪ್ರೇಮ ಎನ್ನುವುದು ಕಾಂಗ್ರೆಸ್ ನವರಿಗೆ ಗೊತ್ತೆ ಇಲ್ಲ.ಈ ವಿಷಯವಾಗಿ ಡಿಕೆಸಿ ಮೇಲೆ ಕೆಸ್ ಹಾಕಬೇಕೆಂದು ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯಲ್ಲಿ ಮನವಿ ಮಾಡಿದ್ದೇನೆ ಎಂದರು.