ಸಚಿವ ಪ್ರಭು ಚವ್ಹಾಣ್ ರಿಂದಪದ್ಮಶ್ರೀ ಪುರಸ್ಕೃತ ರಶೀದ್ ಅಹ್ಮದ ಖಾದ್ರಿಗೆ ಸನ್ಮಾನ

ಹೊಸ ದಿಗಂತ ವರದಿ, ಬೀದರ್: 

ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ದೇಶದ ಉನ್ನತವಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ
ಶಾ ರಶೀದ್ ಅಹ್ಮದ್ ಖಾದ್ರಿಯವರ ಮನೆಗೆ ಗುರುವಾರ ಭೇಟಿ ನೀಡಿ ಸನ್ಮಾನಿಸಿದರು.
ವಿಶ್ವಪ್ರಸಿದ್ಧ ವಿಶಿಷ್ಟ ಕಲೆಯಾಗಿರುವ ಬಿದ್ರಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಎಲೆಮರೆ ಕಾಯಿಯಂತೆ ನಿರಂತರ ಶ್ರಮಿಸುತ್ತಿರುವ ಶಾ ರಶೀದ್ ಅಹ್ಮದ ಖಾದ್ರಿಯವರ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಇದು ಕೇವಲ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯಕ್ಕೆ ಹೆಮ್ಮಯ ವಿಷಯವಾಗಿದೆ ಎಂದು ಹೇಳಿದರು.
ಬೀದರ ಜಿಲ್ಲೆ ಬಿದ್ರಿ ಕಲೆಗೆ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಈ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವ ಶಾ ರಶೀದ್ ಅಹ್ಮದ ಖಾದ್ರಿಯವರ ಸೇವೆ ಮೆಚ್ಚುವಂಥದ್ದು. ಪದ್ಮಶ್ರೀ ಪ್ರಶಸ್ತಿಗೆ ಸರ್ಕಾರ ಸೂಕ್ತ ವ್ಯಕ್ತಿಯನ್ನು ಪರಿಗಣಿಸಿದೆ. ಜಿಲ್ಲೆಗೆ ಸಂದಿರುವ ಪ್ರಶಸ್ತಿಯಿಂದಾಗಿ ಬಿದ್ರಿ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವ ಅನೇಕ ಕುಶಲಕರ್ಮಿಗಳಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಬೀದರ ಜಿಲ್ಲೆಯವರು ದೇಶದ ಉನ್ನತ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಾಕಷ್ಟು ಸಂತೋಷ ತಂದಿದೆ. ಅಹ್ಮದ ಖಾದ್ರಿಯವರ ಸೇವೆ ಹೀಗೆಯೇ ಮುಂದುವರೆಯಲಿ. ಜೀವನದಲ್ಲಿ ಇನ್ನಷ್ಟು ಉನ್ನತ ಗೌರವಗಳು ಸಿಗಲಿ ಎಂದು ಸಚಿವರು ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಅರಹಂತ ಸಾವಳೆ, ಎಂ.ಡಿ ಸಲಾವುದ್ದಿನ್, ರಾಮಶೆಟ್ಟಿ ಪನ್ನಾಳೆ, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘೂಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!