October 9, 2026
Friday, October 9, 2026
spot_img

ಶಾಕ್‌ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ: ಬೆಳ್ಳಂಬೆಳಗ್ಗೆ ಬೆಂಗಳೂರು ನಿವಾಸದ ಮೇಲೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆ ಸತೀಶ್‌ ಜಾರಕಿಹೊಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್‌ ನೀಡಿದ್ದು, ಸಚಿವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎರಡು ಕಾರುಗಳಲ್ಲಿ ಡಾಲರ್ಸ್‌ ಕಾಲೋನಿಯಲ್ಲಿರುವ ಸಚಿವ ಮನೆಯ ಮುಂದು ಅಧಿಕಾರಿಗಳು ಆಗಮಿಸಿದ್ದಾರೆ. ಸದ್ಯ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಈ ಹಿಂದೆಯೂ ಸತೀಶ್ ಸಹೋದರಿ ಪತಿಯಾದ ಮಂಜುನಾಥ್ ಅವರ (ಭಾಮೈದ) ಮನೆ ಮೇಲೆ ಬೆಂಗಳೂರು, ಬೆಳಗಾವಿಯಲ್ಲಿ ದಾಳಿ ಮಾಡಿ 13 ಕೋಟಿ ರೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದರು. 18 ಅನಧಿಕೃತ ಲೈಸೆನ್ಸ್‌ ಕೊಡುವುದಕ್ಕೆ ಸತೀಶ್‌ ಜಾರಕಿಹೊಳಿ ಸಹಾಯ ಮಾಡಿದ್ದರೆಂಬ ಆರೋಪ ಇದೆ.

ವಿದೇಶದಲ್ಲಿ ಹಣ ಹೂಡಿಕೆ ಮಾಡಲು ಜಾರಕಿಹೊಳಿ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿರುವ ಹಿನ್ನೆಲೆ ಇಡಿ ದಾಳಿ ನಡೆಸಿದೆ. ಸಚಿವರಾಗಿದ್ದ ಅವರ ಪ್ರಭಾವ ಬಳಸಿ ಹಲವು ಬಾರ್‌ಗಳಿಗೆ ಲೈಸೆನ್ಸ್‌ ಕೊಡಿಸಿ ಅಲ್ಲಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು ಎನ್ನುವ ಆರೋಪ ಇದೆ.

Must Read