ಹೊಸದಿಗಂತ ವಿಜಯನಗರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚಲಿಸುತ್ತಿದ್ದ ಸ್ಪೇರ್ ಕಾರ್ ಹಾಗೂ ಬೆಂಗಾವಲು ವಾಹನ ಡಿಕ್ಕಿಯಾಗಿ ಬೆಂಗಾಲು ಕಾರಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕಾನಾಹೊಸಳ್ಳಿಯ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಸಂಭವಿಸಿದೆ.
ಸಚಿವ ಶಿವರಾಜ್ ತಂಗಡಗಿ ಅವರು ಮಂಗಳವಾರ ಸಂಜೆ ಕನಕಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಪರಸ್ಪರ ಡಿಕ್ಕಿಯಾಗಿದ್ದ ಸಚಿವರ ಹೆಚ್ಚುವರಿ ವಾಹನ(ಇನ್ನೋವಾ) ಮತ್ತು ಬೆಂಗಾವಲು ವಾಹನ(ಎರಿಟಿಗಾ) ಮಧ್ಯೆ ಅಪಘಾತ ಸಂಭವಿಸಿದೆ. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಮತ್ತೊಂದು ಕಾರಿನಲ್ಲಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆಯಲ್ಲಿ ಗಾಯಗೊಂಡಿರುವ ಎಎಸ್‌ಐ ಹುಲಗಪ್ಪ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನಿಸಿ, ಸಚಿವರು ಪ್ರಯಾಣ ಮುಂದುವರಿಸಿದರು. ಈ ಕುರಿತು ಕಾನಾಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.