ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ಸಮಯ, ಹಣ ಎಲ್ಲವೂ ಉಳಿತಾಯವಾಗಲಿದೆ ಎಂದು ಹೇಳಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ ಸೂಚಿಸಿದ್ದಾರೆ.
ಪದೇ ಪದೆ ಬರುವ ಚುನಾವಣೆಗಳಿಂದ ಬೇರೆ ಅಭಿವೃದ್ಧಿ ಕೆಲಸಗಳು ತಡವಾಗುತ್ತವೆ, ಭಾರತದಲ್ಲಿ ವರ್ಷದ ಮೂರ್ನಾಲ್ಕು ತಿಂಗಳು ಎಲೆಕ್ಷನ್‌ನಲ್ಲಿಯೇ ಕಳೆದುಹೋಗುತ್ತದೆ. ಟೆಂಡರ್ ಕೆಲಸಗಳು ವಿಳಂಬವಾಗುತ್ತವೆ ಎಂದಿದ್ದಾರೆ.
ಈ ರೀತಿ ನಡೆದರೆ ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ. ಚುನಾವಣೆ ಕೆಲಸಗಳಲ್ಲಿ ಎಲ್ಲಾ ಪಕ್ಷಗಳು ಸಕ್ರಿಯವಾಗಿ ಭಾಗಿಯಾಗುತ್ತಾರೆ ಎಂದಿದ್ದಾರೆ.