ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ, ಸಚಿವ ಕೃಷ್ಣಭೈರೇಗೌಡ, ಜಮೀರ್ ಅಹಮದ್ ಐಷಾರಾಮಿ ಜೆಟ್ನಲ್ಲಿಪ್ರಯಾಣಿಸ್ತಾರೆ, ಇತ್ತ ರಾಜ್ಯದ ಎಷ್ಟೋ ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗ್ತಾರೆ. ಇದೇನಾ ನಿಮ್ಮ ಸಮಾಜವಾದ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಒಂದು ರಾಜ್ಯದ ಸಿಎಂ ಹಾಗೂ ಸಚಿವರುಗಳಿಗೆ ಈ ರೀತಿ ದವಲತ್ತಿನ ನಡೆ ಬೇಕಿತ್ತಾ? ರೈತರು ಬರ ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಜೆಸಿಬಿಯಲ್ಲಿ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಐಷಾರಾಮಿ ವಿಡಿಯೋ ಹಂಚಿಕೊಳ್ಳೋದು ಸರಿಯಾ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮಯ ನಾಯಕರು, ಮುಖ್ಯಮಂತ್ರಿ @siddaramaiah ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು.@CMofKarnataka @Iam_KGovindaraj pic.twitter.com/2rcbIy9QgE
— B Z Zameer Ahmed Khan (@BZZameerAhmedK) December 21, 2023