ಹೊಸದಿಗಂತ ವರದಿ ಚಿಕ್ಕಮಗಳೂರು:
ಬೈಕ್ ವೀಲಿಂಗ್ ಮಾಡುತ್ತಿದ್ದ ಅಪ್ರಾಪ್ತ ಸವಾರನನ್ನು ವಶಕ್ಕೆ ಪಡೆದು ಆತನ ಪೋಷಕರ ಮೇಲೆ ಹಾಗೂ ಹಾಗೂ ಆರ್ ಸಿ ಮಾಲೀಕನ ಮೇಲೆ ಸಂಚಾರಿ ಪೊಲೀಸರು ಮೊಕದ್ದಮೆ ದಾಖಲಿಸಿ, ಆರ್ ಸಿ ರದ್ದು ಪಡಿಸಿದ್ದಾರೆ.
ಜುಲೈ 14 ರಂದು ಅಯಾನ್ ಎಂಬಾತ ಸ್ಕೂಟಿಯಲ್ಲಿ ವೀಲಿಂಗ್ ಮಾಡುತ್ತಾ, ಹೆಲ್ಮೆಟ್ ಸಹ ಧರಿಸದೆ ಹೊಸಮನೆ ರಸ್ತೆ ಕಡೆಯಿಂದ ಬೋಳರಾಮೇಶ್ವರ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದರು.
ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸರು ಚಾಲಕನ ಪೋಷಕರು ಮತ್ತು ಅಪ್ರಾಪ್ತನಿಗೆ ವಾಹನ ನೀಡಿದ ಆರ್ ಸಿ ಮಾಲೀಕನ ವಿರುದ್ಧವೂ ಮೊಕದ್ದಮೆ ದಾಖಲಿಸಿ ಆರ್ ಸಿ ರದ್ದುಪಡಿಸಲು ಕ್ರಮ ಜರುಗಿಸಿದ್ದಾರೆ.