February 17, 2026
Tuesday, February 17, 2026
spot_img

ರಾಷ್ಟ್ರವ್ಯಾಪಿ ಜಲಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಿರ್ಚಿ ಎಫ್‌ಎಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ದಿನವೂ ಲೀಟರ್‌ಗಟ್ಟಲೆ ನೀರು ಪೋಲಾಗುತ್ತಲೇ ಇದೆ. ನೀರನ್ನು ಇಂದು ಉಳಿಸದಿದ್ದರೆ ನಾಳೆ ನಾವೇ ಒಂದು ಹನಿಗಾಗಿ ಕಿತ್ತಾಡುವ ಪರಿಸ್ಥಿತಿ ಎದುರಾಗಬಹುದು. ನೀರಿನ ಮಹತ್ವ ಸಾರುವ ಅಭಿಯಾನವೊಂದಕ್ಕೆ ಮಿರ್ಚಿ ಎಫ್‌ಎಮ್‌ ಮುಂದಾಗಿದೆ. ರಾಷ್ಟ್ರವ್ಯಾಪಿ ಜಲಜಾಗೃತಿ ಅಭಿಯಾನಕ್ಕಾಗಿ ರಾಷ್ಟ್ರೀಯ ಜಲ ಮಿಷನ್ ಮತ್ತು ಜಲಶಕ್ತಿ ಸಚಿವಾಲಯದೊಂದಿಗೆ ಮಿರ್ಚಿ ಎಫ್‌ಎಮ್‌ ಕೈ ಜೋಡಿಸಿದೆ.

ಬಾಲಿವುಡ್‌ ಗಾಯಕ ಮೋಹಿತ್‌ ಚೌಹಾಣ್‌, ನಟಿ ತಾಪಸಿ ಪನ್ನು ಮತ್ತು ಅನುಭವ್‌ ಸಿನ್ಹಾ ಜಲ ಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲ ನಿಯೋಗದ ಜೊತೆಗೆ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾವು ಆರ್‌ಜೆ ನೇತೃತ್ವದ ಡಿಜಿಟಲ್‌ ಕಂಟೆಂಟ್‌ನಿಂದ ಬೆಂಬಲಿತವಾಗಿದೆ. ಎಫ್‌ಎಮ್‌ ಕೇಳುಗರಿಗೆ ನೀರಿನ ಉಳಿತಾಯದ ಬಗ್ಗೆ ಮಾಹಿತಿ ಹಾಗೂ ಅರಿವನ್ನು ಮೂಡಿಸುವ ಪ್ರಯತ್ನ ಇದಾಗಿದೆ.

ನೀರಿನ ಬಿಕ್ಕಟ್ಟು ಉದ್ಭವಿಸುವವರೆಗೂ ನಾವೆಲ್ಲರೂ ಅದನ್ನು ಹಗುರವಾಗಿ ಪರಿಗಣಿಸುತ್ತೇವೆ. ಈಗ ನಾನು ಜಲವಾಣಿಯ ಭಾಗವಾಗಿರುವುದರಿಂದ, ಪ್ರತಿಯೊಂದು ಕ್ರಿಯೆಯೂ ಮುಖ್ಯ ಎಂಬುದನ್ನು ಜನರಿಗೆ ನೆನಪಿಸಲು ನನಗೆ ಅವಕಾಶ ಸಿಕ್ಕಿದೆ. ಅದು ನಲ್ಲಿಯನ್ನು ಆಫ್‌ ಮಾಡುವುದಾಗಲಿ, ಪ್ರತಿ ಹನಿಯನ್ನೂ ಉಳಿಸುವುದಾಗಲಿ ಅಥವಾ ನಿಮ್ಮ ಸುತ್ತಲೂ ವ್ಯರ್ಥವಾಗುತ್ತಿರುವ ನೀರನ್ನು ಗಮನಿಸುವುದಾಗಲಿ, ಇಂತಹ ಸಣ್ಣ ಕ್ರಿಯೆಗಳು ಕಾಳಜಿಯ ದೊಡ್ಡ ಸಂಸ್ಕೃತಿಯನ್ನು ನಿರ್ಮಿಸುತ್ತವೆ ಎಂದು ಮೋಹಿತ್‌ ಚೌಹಾಣ್‌ ಹೇಳಿದ್ದಾರೆ.

ಜಲ ಸಂರಕ್ಷಣೆ ಕೇವಲ ನೀತಿಯ ವಿಷಯವಲ್ಲ, ಇದು ನಮ್ಮಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ವೈಯಕ್ತಿಕ ಜವಾಬ್ದಾರಿಯಾಗಿದೆ. ಇಂದು ನಾವು ಉಳಿಸುವ ಪ್ರತಿಯೊಂದು ನೀರಿನ ಹನಿಯೂ ಭವಿಷ್ಯದ ಪೀಳಿಗೆಗೆ ನಾವು ನೀಡುವ ಭರವಸೆಯಾಗಿದೆ. ಎಲ್ಲರೂ ನೀರನ್ನು ಉಳಿಸೋಣ, ನಮ್ಮ ಮುಂದಿನ ಪೀಳಿಗೆಗೆ ನೀರಿನ ಮಹತ್ವ ತಿಳಿಸೋಣ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !