ಕನ್ನಡ ಲಾಂಛನದಲ್ಲಿ ಲೋಪದೋಷ: ಅಧಿಕಾರಿಗಳ ವಿರುದ್ಧ ಅರವಿಂದ ಬೆಲ್ಲದ್‌ ಆಕ್ರೋಶ

ಹೊಸದಿಗಂತ ವರದಿ ಹುಬ್ಬಳ್ಳಿ:

ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮಾಡಿದ ಕನ್ನಡ ಲಾಂಛನದಲ್ಲಿ ಹಲವು ಲೋಪದೋಷಗಳಾಗಿದ್ದು, ಅಧಿಕಾರಿಗಳ ವಿರುದ್ಧ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.

ಹು-ಧಾ ಮಹಾನಗರ ಪಾಲಿಕೆ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಭುವನೇಶ್ವರಿ ಮಾತೆ ಪೂಜೆ ಹಾಗೂ ಭವ್ಯ ಮೆರವಣಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಂಛನದಲ್ಲಿ ಸಹ ೫೦ನೇ ಎಂಬ ಇಂಗ್ಲಿಷ್ ಸಂಖ್ಯೆ ಬಳಸಲಾಗಿದೆ. ಇನ್ನೂ ಆನೆಯ ಮೇಲೆ ಪರ್ಷಿಯನ್ ಸಂಸ್ಕೃತಿಯ ಹೋಲುವ ಚಿತ್ರವಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಲೋಪದೋಷಗಳು ಆಗಲು ಸಾಧ್ಯ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕನ್ನಡ ಭಾಷೆಗೆ ಹಲವು ಬೇರೆ ಭಾಷೆಗಳು ಸವಾಲಾಗಿ ಪರಿಣಮಿಸಿವೆ. ಭಾಷೆಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆ‌.‌ ಅವಳಿನಗರ ಬಹುತೇಕ ಅಂಗಡಿ, ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಮಾಯವಾಗಿವೆ ಎಂದರು.

ಕರ್ನಾಟಕ ರಾಜ್ಯೋತ್ಸವ ಆಚರಿಸುವ ಮೂಲ ಉದ್ದೇಶ ಕನ್ನಡ ಭಾಷೆ ಜಾಗೃತಿ ಮೂಡಿಸುವುದಾಗಿದೆ. ಈ ರಾಜ್ಯ ಕರ್ನಾಟಕವಾಗಲೂ ಹಲವು ಮಹನೀಯರ ಕೊಡಗೆ ನೀಡಿದ್ದಾರೆ. ಅವರನ್ನು ಸ್ಮರಿಸುವ ಕಾರ್ಯ ನಮ್ಮೆಲ್ಲರದಾಗಿದೆ. ಗಂಗೂಬಾಯಿ ಹಾನಗಲ್ ಅವರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸದ್ಯ ಅವರ ಹೆಸರಿನಲ್ಲಿ ಇರುವ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿ ತಲುಪಿದ್ದು, ಪಕ್ಷ, ಬೇಧ ಮರಿತು ಉಳಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!