ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಖನೌ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿದೆ.
109 ರನ್ ಗಳ ಜೊತೆಯಾಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡಕ್ಕೆ ಜೋಶ್ ಇಂಗ್ಲಿಸ್ ಮತ್ತು ಮಿಚೆಲ್ ಮಾರ್ಷ್ ಭರ್ಜರಿ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 109 ರನ್ ಗಳ ಜೊತೆಯಾಟ ನೀಡಿದರು.
ಇಂಗ್ಲಿಸ್ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು. ನಂತರ ಬಂದ ನಿಕೋಲಸ್ ಪೂರನ್ 16 ರನ್ ಗಳಿಸಿ ನಿರ್ಗಮಿಸಿದರು. ಬಳಿಕ 3ನೇ ವಿಕೆಟ್ ಗೆ ಜೊತೆಯಾದ ಮಿಚೆಲ್ ಮಾರ್ಷ್ ಹಾಗೂ ನಾಯಕ ರಿಷಭ್ ಪಂತ್ 64 ರನ್ಗಳ ಆಟ ನೀಡಿದರು. ರಿಷಭ್ ಪಂತ್ 35 ರನ್ಗಳಿಸಿ ರನ್ಔಟ್ ಆದರು.
ಮಿಚೆಲ್ ಮಾರ್ಷ್ ಸ್ಪೋಟಕ ಬ್ಯಾಟಿಂಗ್
ಅತ್ತ ಆರಂಭಿಕನಾಗಿ ಬಂದು ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ಗಳ ಸಹಿತ 96 ರನ್ಗಳಿಸಿದರು. ಅಂತಿಮವಾಗಿ ಕೊನೆಯ ಓವರ್ನ 5ನೇ ಎಸೆತದಲ್ಲಿ ರನ್ಔಟ್ ಆಗುವ ಮೂಲಕ ಶತಕ ವಂಚಿತರಾದರು.



