ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರ ಮಿಟ್ಟಿ ಮೇ ಮಿಲಾ ದೂಂಗಾ (ಮಣ್ಣಿನೊಳಗೆ ಮಣ್ಣು ಮಾಡುತ್ತೇನೆ) ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಕಂಗನಾ ರಣಾವತ್ (Kangana Ranaut) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದ್ದಾರೆ.
ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಅವರ ಮಗ ಅಸದ್ ಮತ್ತು ಆತನ ಸಹಚರನನ್ನು ಪೊಲೀಸ್ ಎನ್‌ಕೌಂಟರ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಕಂಗನಾ, ನನ್ನ ಅಣ್ಣ ಯೋಗಿ ಆದಿತ್ಯನಾಥ್ ಅವರನ್ನು ನಾನು ಇಷ್ಟಪಡುವಷ್ಟು ಬೇರೆ ಯಾರು ಇಷ್ಟಪಡಲು ಸಾಧ್ಯವಿಲ್ಲ ಎಂದು ಫೆಬ್ರವರಿ 25ರಂದು ಮುಖ್ಯಮಂತ್ರಿ ಯೋಗಿ ನೀಡಿದ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
No one like my Bhaiya @myogiadityanath … 🥰🙏 https://t.co/ntzDgeXawu
— Kangana Ranaut (@KanganaTeam) April 13, 2023
2005ರಲ್ಲಿ ಬಿಎಸ್‌ಪಿ ಶಾಸಕರೊಬ್ಬರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ನಿರ್ಲಜ್ಜವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 25ರಂದು ಯೋಗಿ, ಸಮಾಜವಾದಿ ಪಕ್ಷವು ಮಾಫಿಯಾಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿ ಈ ಎಲ್ಲ ದುಷ್ಟರನ್ನು ನಾನು ನಾಶ ಮಾಡುತ್ತೇನೆ ಎಂದು ವಿಧಾನಸಭೆಯಲ್ಲಿ ಪ್ರತಿಜ್ಞೆ ಮಾಡಿದರು.
ಕಂಗನಾ ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರ ಭಾಷಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.