Monday, December 22, 2025

HEALTH | ಮಕ್ಕಳಿಗೆ ಹಾಲಿನ ಜತೆ ಈ ಪದಾರ್ಥಗಳನ್ನು ಮಿಕ್ಸ್‌ ಮಾಡಿ ಕುಡಿಸಿ, ಮೂಳೆಗಳು ಗಟ್ಟಿಯಾಗತ್ತೆ

ಮಕ್ಕಳಿಗೆ ಹಾಲಿನ ಜತೆ ಈ ಪದಾರ್ಥಗಳನ್ನು ಹಾಕಿ ನೀಡಿ, ಅಂಗಡಿಯಲ್ಲಿ ಸಿಗುವ ಪುಡಿಗಳನ್ನು ಕೊಡುವ ಬದಲು ಮನೆಯ ಪದಾರ್ಥಗಳನ್ನು ನೀಡಿ. ಇದು ಮಕ್ಕಳ ಇಮ್ಯುನಿಟಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಅರಿಶಿನದಲ್ಲಿರುವ ‘ಕರ್ಕ್ಯುಮಿನ್’ ಅಂಶವು ಅತ್ಯುತ್ತಮ ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚಗಿನ ಹಾಲಿಗೆ ಚಿಟಿಕೆಯಷ್ಟು ಅರಿಶಿನ ಸೇರಿಸಿ ಕುಡಿಸುವುದರಿಂದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಮಕ್ಕಳಲ್ಲಿ ಹೆಚ್ಚುತ್ತದೆ. ಇದು ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಕಾರಿ.

ಹಾಲಿಗೆ ಬಿಳಿ ಸಕ್ಕರೆ ಸೇರಿಸುವ ಬದಲು ಬೆಲ್ಲ ಬಳಸುವುದು ಆರೋಗ್ಯಕರ. ಬೆಲ್ಲದಲ್ಲಿ ಕಬ್ಬಿಣದಂಶ ಯಥೇಚ್ಛವಾಗಿದ್ದು, ಇದು ಮಕ್ಕಳಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಅಲ್ಲದೆ, ಬೆಲ್ಲ ಮತ್ತು ಹಾಲಿನ ಸಂಯೋಜನೆಯು ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಖರ್ಜೂರವು ನೈಸರ್ಗಿಕ ಸಿಹಿ ಮತ್ತು ಪ್ರೋಟೀನ್‌ನ ಆಗರ. ಹಾಲನ್ನು ಕುದಿಸುವಾಗ ಒಂದೆರಡು ಹಸಿ ಖರ್ಜೂರಗಳನ್ನು ಹಾಕಿ ಕುಡಿಸುವುದರಿಂದ ಮಕ್ಕಳಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ. ಇದು ಚಳಿಗಾಲದಲ್ಲಿ ಉಂಟಾಗುವ ಆಯಾಸವನ್ನು ದೂರಮಾಡಿ ಮಕ್ಕಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಮನೆಯಲ್ಲಿಯೇ ತಯಾರಿಸಿದ ಬಾದಾಮಿ ಪುಡಿಯನ್ನು ಹಾಲಿಗೆ ಸೇರಿಸುವುದರಿಂದ ಮೆದುಳಿನ ವಿಕಾಸ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕವಾಗಿದೆ. ಹಾಗೆಯೇ, ಚಿಟಿಕೆಯಷ್ಟು ಜಾಯಿಕಾಯಿ ಪುಡಿಯನ್ನು ಹಾಲಿಗೆ ಸೇರಿಸುವುದರಿಂದ ಚಳಿಗಾಲದಲ್ಲಿ ಉಂಟಾಗುವ ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಮಗುವಿಗೆ ಉತ್ತಮ ನಿದ್ರೆ ಬರುತ್ತದೆ.

error: Content is protected !!