ಮಿಜೋರಾಂ ವಿಧಾನಸಭಾ ಚುನಾವಣೆ: ಇಂದು 174 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಚ ರಾಜ್ಯ ಚುನಾವಣೆಯ ಪೈಕಿ ಇಂದು ಮಿಜೋರಾಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, 174 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ರಾಜ್ಯಾದ್ಯಂತ 13 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಮಿಜೋರಾಂ ಮತ ಎಣಿಕೆಯು ಡಿಸೆಂಬರ್‌ 3ರಂದು ನಡೆಯಬೇಕಿತ್ತು. ಆದರೆ ಕ್ರೈಸ್ತ ಧರ್ಮೀಯರೇ ಹೆಚ್ಚಾಗಿರುವ ರಾಜ್ಯದಲ್ಲಿ ಭಾನುವಾರದಂದು ಧಾರ್ಮಿಕ ಚಟು ವಟಿಕೆಗಳಲ್ಲಿ ಜನರು ಪಾಲ್ಗೊಳ್ಳುವುದರಿಂದ ಮತ ಎಣಿಕೆ ದಿನಾಂಕವನ್ನು ಮುಂದೂಡಬೇಕು ಎಂದು ಸಂಘಟನೆಗಳು ಕೋರಿದ್ದವು. ಹೀಗಾಗಿ ಮತ ಎಣಿಕೆ ಪ್ರಕ್ರಿಯೆನ್ನು ಮುಂದೂಡಲಾಗಿತ್ತು.

18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿತ್ತು. ರಾಜ್ಯದ 8.57 ಲಕ್ಷ ಮತದಾರರಲ್ಲಿ 80 ಪ್ರತಿಶತಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಿಜೋರಾಂ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳು ಬೇಕಿದೆ. ಈಗಾಗಲೇ 4 ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಜೋರಾಂನಲ್ಲಿ ಯಾರ ಪ್ರಭಾವ ಎಷ್ಟಿದೆ ಎನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!