ಹಳಸಿದ ಸಾಂಬಾರ್‌ ಬಡಿಸಿದ್ದಕ್ಕೆ ಕ್ಯಾಂಟೀನ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಾಸಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಗರದ ಆಕಾಶವಾಣಿ ಶಾಸಕರ ಕ್ಯಾಂಟೀನ್‌ನಲ್ಲಿ ಹಳಸಿದ ದಾಲ್ ಬಡಿಸಿದ್ದಕ್ಕೆ ಶಿವಸೇನಾ ಶಾಸಕ  ಕ್ಯಾಂಟೀನ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈನ ಆಕಾಶವಾಣಿ ಶಾಸಕರ ಕ್ಯಾಂಟೀನ್ (ಬಳಿ ಘಟನೆ ನಡೆದಿದ್ದು, ಬುಲ್ದಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್, ಎಂಎಲ್‌ಎಗೇ ಹಳಸಿದ ದಾಲ್ ನೀಡುತ್ತಿದ್ದೀರಾ? ಎಂದು ಕ್ಯಾಂಟೀನ್ ಮಾಲೀಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಶಾಸಕ ಸಂಜಯ್ ಗಾಯಕ್ವಾಡ್ ಕ್ಯಾಂಟೀನ್‌ನಲ್ಲಿ ಥಾಲಿಯನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಾಲ್ ದುರ್ವಾಸನೆ ಬರುತ್ತಿದ್ದರಿಂದ ಶಾಸಕರು ಕ್ಯಾಂಟೀನ್‌ಗೆ ಹೋಗಿ ಬೇಳೆಯನ್ನು ತಯಾರಿಸಿದ ಸಿಬ್ಬಂದಿಯನ್ನ ಕೇಳಿದ್ರು. ಬಳಿಕ ಅಲ್ಲೇ ಇದ್ದ ಜನರನ್ನ ಕರೆದು ದಾಲ್ ಪ್ಯಾಕೆಟ್ ಅನ್ನು ತೋರಿಸಿದ್ದಾರೆ. ದಾಲ್ ತಯಾರಿಸಿದವನಿಗೂ ಅದರ ದುರ್ವಾಸನೆ ತೋರಿಸಿ ಬಳಿಕ ಮುಖಕ್ಕೆ ರಪ್ಪನೆ ಬಾರಿಸಿದ್ದಾರೆ.

ಇದನ್ನು ನನಗೆ ಕೊಟ್ಟವನು ಯಾರು? ಇದರ ವಾಸನೆ ನೋಡಿ. ಇದನ್ನು ಪ್ಯಾಕ್ ಮಾಡಿ, ಆಹಾರ ಇಲಾಖೆಗೆ ಕರೆ ಮಾಡಿ. ನೀವು ಈ ಹಳಸಿದ ಪದಾರ್ಥವನ್ನು ಶಾಸಕರಿಗೆ ನೀಡುತ್ತಿದ್ದೀರಿ. ಇನ್ನು ಜನಸಾಮಾನ್ಯರಿಗೆ ಏನು ನೀಡುತ್ತಿದ್ದೀರಿ? ಇಂತಹ ಹಳಸಿದ ಆಹಾರ ಸೇವಿಸಿದರೆ ಜನರು ಸಾಯಬಹುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!