ಶಾಸಕ ಚೆನ್ನಾರೆಡ್ಡಿ ಪಾಟೀಲ್ 30-40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ರು: ಪರಶುರಾಮ್‌ ಪತ್ನಿ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಪಿಎಸ್‌ಐ ಒಬ್ಬರ ಹಠಾತ್‌ ಹೃದಯಾಘಾತದ ಸುದ್ದಿ ಮಿಂಚಿನಂತೆ ಸಂಚಾರ ಮಾಡಿದ್ದು, ಇದು ಸಾಮಾನ್ಯ ಸಾವಲ್ಲ ಸರ್ಕಾರದ ಒತ್ತಡದಿಂದ ಆದ ಹೃದಯಾಘಾತ ಎನ್ನಲಾಗುತ್ತಿದೆ.  ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ  ನಿಧನರಾಗಿದ್ದಾರೆ. ಇವರ ನಿಧನದ ಬಳಿಕ ಪತ್ನಿ ಶ್ವೇತಾ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಚೆನ್ನಾರೆಡ್ಡಿ ಪಾಟೀಲ್ 30/ 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ‌ನನಗೆ ಹೇಳಿದ್ದಾರೆ. ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ. ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ.

ಒಬ್ಬ ಪೊಲೀಸ್ ಅಧಿಕಾರಿಗೆ ಆದ್ರೂ ಖಾಕಿ ಧರಿಸಿದವರೆ ಸಪೋರ್ಟ್ ಮಾಡ್ತಿಲ್ಲ. ಯಾರೋ ಎಂಎಲ್ಎಗೆ ಸಪೋರ್ಟ್ ಮಾಡ್ತಿದ್ದಾರೆ. ಅವರು ದುಡ್ಡು ಕೊಡ್ತಾರೆ, ಆದ್ರೂ ಅವರಿಗೆ ಸಪೋರ್ಟ್ ಮಾಡ್ತಾರೆ. ಇನ್ನೂ ಎಷ್ಟು ದುಡ್ಡು ಕೊಟ್ಟು ಎಂಎಲ್ಎಯನ್ನು ಸಾಕ್ತಿರಾ? ಹಗಲು ರಾತ್ರಿ, ಹೆಂಡ್ತಿ ಮಕ್ಕಳನ್ನ ಬಿಟ್ಟು ದುಡಿತೀರಾ.. ಯಾರಿಗೋಸ್ಕರ? ಎಂಎಲ್ಎಗೋಸ್ಕರ ದುಡಿತೀರಾ..? ಎಷ್ಟು ದಿನ ಎಂಎಲ್ಎಗೆ ಊಟ ಹಾಕ್ತಿರಾ..?. ದುಡ್ಡಿನ ಊಟ ಹಾಕ್ತಿದ್ದೀರಾ..? ಎಷ್ಟು ದಿನ ಹಾಕ್ತಿರಾ..? ಎಫ್ಐಆರ್ ದಾಖಲಿಸಿಕೊಂಡು ನಮಗೆ ನ್ಯಾಯ ಕೊಡಿಸಿ ಎಂದು ಶ್ವೇತಾ ಕಣ್ಣೀರಿಟ್ಟಿದ್ದಾರೆ.

ತಪ್ಪು ಮಾಡಿದರೆ ಅವರನ್ನ ತೆಗೆಬೇಕಿತ್ತು. ಜಾತಿ ಕಾರಣಕ್ಕಾಗಿ ಏಕೆ ತೆಗೆದ್ದೀರಿ. ಈ ಜನರೇಷನ್ ನಲ್ಲೂ ಜಾತಿ ವ್ಯವಸ್ಥೆ ಏನು? ನಾವು ಎಸ್ಸಿ ಆಗಬೇಕು ಅಂತ ದೇವರಲ್ಲಿ ಕೇಳ್ಕೊಂಡು ಬಂದಿರ್ತಿವಾ? ಎಂಎಲ್ಎ ತಪ್ಪಿದೆ ಅವರು ಬರಬೇಕು. ಜಾತಿ, ಹಣಕ್ಕಾಗಿ ನನ್ನ ಗಂಡನ ಜೀವ ಹೋಯ್ತು. ನೀವೆಲ್ಲ ಒಬ್ಬ ದಕ್ಷ ಅಧಿಕಾರಿಯನ್ನ ಕಳೆದುಕೊಂಡಿದ್ದೀರಿ. ಎಸ್ಪಿ ಮೇಡಂ ನಮಗೆ ಎಫ್ಐಆರ್ ಕೊಡ್ತಿನಿ ಬನ್ನಿ ಅಂದ್ರು. ಅವರನ್ನ ನಂಬ್ಕೊಂಡು ಖಾಸಗಿ ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೀವಿ. ನನ್ನ ಮಕ್ಕಳಿಗೆ ನಾನು ಏನಂತ ಹೇಳಬೇಕು. ಪೊಲೀಸ್ ಇಲಾಖೆಯಲ್ಲಿ ‌ಮಾನವೀಯತೆ ಇಲ್ಲ. ನಾನು ಎಂಟು ತಿಂಗಳ ಗರ್ಭಿಣಿ, ಈ ಮಗು ಅಪ್ಪ ಎಲ್ಲಿ ಎಂದರೆ ಏನು ಹೇಳಬೇಕು? ರಸ್ತೆಯಲ್ಲಿ ಕೂರೋ ಹಾಗೆ ಮಾಡಿದ್ದೀರಿ, ಪರವಾಗಿಲ್ಲ ಆದರೆ ನನಗೆ ನ್ಯಾಯ ಬೇಕು. ಜನರ ರಕ್ಷಣೆ ಮಾಡೋ ಪೊಲೀಸರಿಗೆ ನ್ಯಾಯ ಇಲ್ಲ ಅಂದ್ರೆ ಇನ್ನು ಮಾಮೂಲಿ ಜನರು ನಿಮಗೆ ಯಾವ ಲೆಕ್ಕ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಇಂತಹ ಶಾಸಕರ ಸದಸ್ಯತ್ವ ರದ್ದುಗೊಳಿಸಬೇಕು , ಭ್ರಷ್ಟಾಚಾರದ ಮೂಲ ಈ ಚುನಾಯಿತ ಪ್ರತಿನಿಧಿಗಳು , ಇಂತವರಿಗೆ ಶಿಕ್ಷೆ ನೀಡುವ ವ್ಯವಸ್ಥೆ ಬೇಕು ,, ಇದು ಅಡ್ನಾಡಿ ಪ್ರಜಾಪ್ರಭುತ್ವ , ಇಲ್ಲಿ ದುಷ್ಟ ಭ್ರಷ್ಟನು ಸಹಿತ ಪುನಃ ಪುನಃ ಗೆಲ್ಲುತ್ತಾರೆ ಇದು ದುರಂತ ವ್ಯವಸ್ಥೆ.

LEAVE A REPLY

Please enter your comment!
Please enter your name here

error: Content is protected !!