ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಜನ್ಮದಿನದ ನಿಮಿತ್ತ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಕಾರ್ಯಕ್ರಮ ಗಂಗೊಳ್ಳಿಯಲ್ಲಿ ಸೋಮವಾರ ನಡೆಯಿತು.
ನಿವೃತ್ತ ಭೂಸೇನಾ ಅಧಿಕಾರಿ ರತ್ನಾಕರ ಬೈಂದೂರು ಮತ್ತು ನಿವೃತ್ತ ವಾಯುಸೇನಾ ಅಧಿಕಾರಿ ಟಿ.ದಿನಕರ ಶ್ಯಾನುಭಾಗ್ ಅವರನ್ನು ಗಂಗೊಳ್ಳಿಯ ಅವರ ಮನೆಯಲ್ಲಿ ಭೇಟಿ ಮಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ನಿವೃತ್ತ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆದರು.
ಉಷಾ ದಿನಕರ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಚಂದ್ರ ಖಾರ್ವಿ ಲೈಟ್‌ಹೌಸ್, ರಾಜೇಂದ್ರ ಶೇರುಗಾರ್, ಗುರುರಾಜ್ ಖಾರ್ವಿ, ಪಿ.ಬಿ.ನಾಗರಾಜ್ ಖಾರ್ವಿ, ಅಶ್ವಿನಿ ಖಾರ್ವಿ, ನಾಗರತ್ನ ಶೇರುಗಾರ್, ಬೈಂದೂರು ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ್ ಎನ್.ಡಿ., ಗ್ರಾಪಂ ಮಾಜಿ ಸದಸ್ಯರಾದ ಬಿ.ಗಣೇಶ ಶೆಣೈ, ಬಿ.ರಾಘವೇಂದ್ರ ಪೈ, ಪ್ರಶಾಂತ ಖಾರ್ವಿ, ಪ್ರಮುಖರಾದ ಜಯಂತ್ ಶೇರುಗಾರ್, ರಘುನಾಥ ಖಾರ್ವಿ, ರಾಘವೇಂದ್ರ ಗಾಣಿಗ, ಅಶೋಕ ಪೂಜಾರಿ, ಸಂದೀಪ್ ಖಾರ್ವಿ, ನಿತಿನ್ ಖಾರ್ವಿ, ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.