ಶಾಸಕ ರುದ್ರಪ್ಪ ಲಮಾಣಿಗೆ ಸಿಗದ ಸಚಿವ ಸ್ಥಾನ: ಅಭಿಮಾನಿಗಳಿಂದ ಪ್ರತಿಭಟನೆ

ಹೊಸ ದಿಗಂತ ವರದಿ, ಹಾವೇರಿ:

ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿರುವುದನ್ನು ಖಂಡಿಸಿ ನಗರದ ಇಜಾರಿ ಲಕಮಾಪುರದ ಶಾಸಕರ ನಿವಾಸದ ಎದುರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಪ್ರತಿಭಟನೆ ಮಾಡುವ ಮೂಲಕ ಅಸಮಾಧಾನ ಹೊರಹಾಕಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಂಜಾರ ಸಮುದಾಯದ ಕುಮಾರ ನಾಯಕ, ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೊತೆಗೆ ಈ ಬಾರಿ ಲಂಬಾಣಿ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದತ್ತ ಬರಲು ಸಾಧ್ಯವಾಗಿದೆ. ಜಿಲ್ಲೆ ಹಾಗೂ ಬಂಜಾರ ಸಮುದಾಯದ ಕೋಟಾದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬಹುದಿತ್ತು ಎಂದರು.

ಕಾಂಗ್ರೆಸ್ ಪಕ್ಷದ ಶಂಕರ ಮೆಹರವಾಡೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಆಗಿದ್ದರು.
ಆದರೆ ನಮ್ಮ ಪಕ್ಷದ ಐವರು ಶಾಸಕರ ಪೈಕಿ ಒಬ್ಬರೂ ಸಚಿವರಾಗದಿರುವುದು ವಿಪರ್ಯಾಸ. ಹಾವೇರಿ ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದರೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಇನ್ಮುಂದೆ ಅನ್ಯ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಂಡರೆ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗುತ್ತವೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದ್ದ ರುದ್ರಪ್ಪ ಲಮಾಣಿ ಅವರನ್ನು ಸಚಿವ ಸಂಪುಟದಿಂದ ವಂಚಿತರನ್ನಾಗಿಸಿರುವುದು ಬೇಸರ ಮೂಡಿಸಿದೆ ಎಂದರು.

ರಾಕೇಶ ಫಿಲಿಪ್ ಪಿಂಟೋ, ಜಯರಾಮ ಮಾಳಾಪುರ, ಚಂದ್ರಪ್ಪ ಬೆನಕನಹಳ್ಳಿ, ನಾಗೇಶ ಕೋಡಬಾಳ, ಉಮರ್ ಇನಾಮದಾರ, ಜಾಫರ್ ಅತ್ತಾರ, ಸಯ್ಯದ್ ಉಮರ್, ರಮೇಶ ಮುದ್ನಾಳ, ಶರಣಪ್ಪ ತಳವಾರ, ಸಂತೋಷ ಲಮಾಣಿ, ರಮೇಶ ಲಮಾಣಿ, ಕಿರಣ ಲಮಾಣಿ, ಕೃಷ್ಣ ಲಮಾಣಿ, ಗುಡ್ಡಪ್ಪ ಲಮಾಣಿ, ಪ್ರಕಾಶ ಲಮಾಣಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!