ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಘೋಷಿಸಿದಂತೆ ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ ಹಾಜರಾದ ಶಾಸಕರಿಗೆ ವಿಶೇಷ ಬಹುಮಾನ ನೀಡಿರುವ ವಿಶೇಷ ಘಟನೆ ನಡೆದಿದೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ನಿಗದಿತ ಸಮಯಕ್ಕೆ ಅಧಿವೇಶನಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ ಅವರು ರಾಷ್ಟ್ರ ಮತ್ತು ರಾಜ್ಯ ಲಾಂಛನವಿರುವ, ವಿಶಿಷ್ಟವಾಗಿ ತಯಾರಿಸಿದ ಕಪ್ ಮತ್ತು ಸಾಸರ್ ಅನ್ನು ಬಹುಮಾನವಾಗಿ ನೀಡಿದ್ದಾರೆ.
ಈ ಮೂಲಕ ಸಮಯ ಪಾಲನೆಯ ಮಹತ್ವವನ್ನು ಇತರರಿಗೂ ಸಾರಿದಂತಾಗಿದೆ.