ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆಯ ಪತ್ರ ಒಂದನ್ನು ನೀಡಿದ್ದಾರೆ.
ಸಮಾವೇಶದಲ್ಲಿ ಗಣ್ಯಾತಿ ಗಣ್ಯರ ವೇದಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಮೋದಿ ಅವರಿಗೆ ಸ್ವತಃ ಮಣಿಗಳ ಹಾರವನ್ನು ಹಾಕಿ ಸ್ವಾಗತ ಕೋರಿದರು. ಇದಾದ ನಂತರ ವೇದಿಕೆಯಲ್ಲಿ ಕೊನೆ ಭಾಗದಲ್ಲಿ ಕುಳಿತಿದ್ದ ಜಿ.ಟಿ. ದೇವೇಗೌಡ ಅವರು ಪ್ರಧಾನಿ ಅವರಿಗೆ ಚೀಟಿಯೊಂದನ್ನು ಕೊಡಲು ಇಟ್ಟುಕೊಂಡಿದ್ದರು. ಮೋದಿಯನ್ನು ಸ್ವಾಗತಿಸುವ ವೇಳೆ ಚೀಟಿ ಕೊಡಲಾಗದ ಹಿನ್ನೆಲೆಯಲ್ಲಿ ಅವರು ಭಾಷಣ ಮುಗಿಸಿ ಹೋಗುವ ವೇಳೆ ಕೊಡುವುದಕ್ಕಾಗಿ ಕಾಯುತ್ತಿದ್ದರು. ಹೀಗಾಗಿ, ವೇದಿಕೆಯಿಂದ ಇಳಿಯುವ ಜಾಗದಲ್ಲಿಯೇ ಕೊನೆಯಲ್ಲಿದ್ದ ಜಿಟಿಡಿ ಅವರು ಕೊನೆಗೂ ತಾವಂದುಕೊಂಡಂತೆ ಮೋದಿಗೆ ಚೀಟಿಯನ್ನು ಕೊಟ್ಟೇಬಿಟ್ಟರು.
ಏನಿದೆ?
ಜೆಡಿಸ್ ನಾಯಕರೂ ಆಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪ್ರಧಾನು ಮೋದಿ ಕೈಗೆ ರಹಸ್ಯ ಚೀಟಿಯನ್ನು ನೀಡದೇ, ಭರವಸೆ ಹಾಗೂ ಬೇಡಿಕೆ ಪತ್ರವನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಜೆಡಿಎಸ್ ಬಹಳ ಗಂಭೀರವಾಗಿ ಚುನಾವಣೆ ನಡೆಸುತ್ತಿದೆ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲಿಸುವುದರ ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿಸಲು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲಿಸಲು ಜೆಡಿಎಸ್ ಪಕ್ಷ ಎಲ್ಲಾ ರೀತಿಯ ಕಾರ್ಯಕ್ರಮ ರೂಪಿಸಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮ ಮೂರು ಕ್ಷೇತ್ರಗಳ ಜೊತೆಗೆ ನಿಮ್ಮ ಕ್ಷೇತ್ರಗಳನ್ನೂ ಗೆಲ್ಲಿಸಿಕೊಡುತ್ತೇವೆ ಎಂಬ ಭರವಸೆಯನ್ನು ಪತ್ರದಲ್ಲಿ ನೀಡಿದ್ದಾರಂತೆ.
ಜೊತೆಗೆ, ನಮ್ಮ ರಾಜ್ಯಕ್ಕೆ ನೀವು ಮಹಾದಾಯಿ ಹಾಗೂ ಮೇಕೆದಾಟು ಯೋಜನೆಗಳಿಗೆ ಕಾನೂನು ಪರಿಹಾರ ಮಾಡಿಕೊಡಿ ಎಂದು ಚೀಟಿಯಲ್ಲಿ ಬರೆದು ಮನವಿ ಮಾಡಿದ್ದಾರಂತೆ. ಈ ಮೂಲಕ ರಾಜ್ಯ ದಕ್ಷಿಣ ಭಾಗಕ್ಕೆ ಕಾವೇರಿ ನೀರನ್ನು ಉಳಿಸುವಲ್ಲಿ ಹಾಗೂ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಕ್ಕೆ ನೆರವಾಗಬೇಕು ಎಂದು ದೊಡ್ಡ ಬೇಡಿಕೆಯೊಂದನ್ನು ಅವರ ಮುಂದಿಟ್ಟಿದ್ದಾರೆ.