ಹೊಸದಿಗಂತ ವರದಿ ವಿಜಯಪುರ:
ಬಿ.ಕೆ. ಹರಿಪ್ರಸಾದ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು ಅವರನ್ನು ಧಮ್ಮು, ತಾಕತ್ ಇದ್ದರೆ ಡಿ.ಕೆ.ಶಿವಕುಮಾರ್ ಉಚ್ಚಾಟನೆ ಮಾಡಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲ್ ಹಾಕಿದರು.
ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ಗುಡುಗಿದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಈಗ ಕ್ರಮಕೈಗೊಳ್ಳಲಿ ನೋಡೋಣ. ಆದರೆ ಅದು ಸಾಧ್ಯವಿಲ್ಲ ಎಂದರು.
ಸನಾತನ ಧರ್ಮದ ವಿರುದ್ಧ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ. ಸನಾತನ ಧರ್ಮದ ಪರವಾಗಿ ಆದಿಚುಂಚನಗಿರಿ ಸ್ವಾಮಿ, ಮೂರು ಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಉಳಿದವರು ಮಾತನಾಡಿಲ್ಲ, ಉಳಿದವರೂ ಧ್ವನಿ ಎತ್ತಬೇಕು ಎಂದರು.
ಕಾವಿ ಅರಬಿ ಹಾಕಿದವರು ಅನೇಕರು ಖಂಡನೆ ಮಾಡಿಲ್ಲ. ಇಂತಹ ಸ್ವಾಮಿಗಳು ನಮಗೇಕೆ ಬೇಕು. ಸ್ವಾಮೀಜಿಗಳಲ್ಲೂ ಕೆಲವರು ಕಪಟರು ಇದ್ದಾರೆ. ಹಿಂದು ಧರ್ಮದ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದರು.