ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ..ಆದರೆ ಯುವಕರು ಫೋನಿನಲ್ಲಿ ಸೋಷಿಯಲ್ ಮೀಡಿಯಾ ಜೊತೆಗೆ ಗೇಮ್ ಗಳನ್ನೂ ಆಡುತ್ತಿದ್ದಾರೆ. ಜ್ಞಾನ ಹೆಚ್ಚಿಸಿಕೊಳ್ಳಲು ಮಾತ್ರವಲ್ಲದೆ ಸೆಲ್ ಫೋನ್ ನಿಂದಾಗಿ ಎರಡು ಗ್ರಾಮಗಳ ನಡುವೆ ಹೊಡೆದಾಟ ನಡೆದಿದೆ. ಗೇಮಿಂಗ್ಗೆ ಸಂಬಂಧಿಸಿದಂತೆ ಯುವಕರ ನಡುವೆ ಆರಂಭವಾದ ಗಲಾಟೆ ಎರಡು ಗ್ರಾಮಗಳ ನಡುವೆ ಘರ್ಷಣೆಗೆ ಕಾರಣವಾಯಿತು ಒಂದು ಹಳ್ಳಿ ಇನ್ನೊಂದು ಹಳ್ಳಿಯ ಮೇಲೆ ಕತ್ತಿ, ಕೋಲುಗಳಿಂದ ದಾಳಿ ನಡೆಸಿದೆ.
ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಂದ್ಯಾಲ್ ಜಿಲ್ಲೆಯ ಮಹಾನಂದಿ ಮಂಡಲದಲ್ಲಿ ಬಸವಪುರಂ ಮತ್ತು ಗಾಜುಲಪಲ್ಲಿ ಗ್ರಾಮದ ಯುವಕರ ನಡುವೆ ಸೆಲ್ ಫೋನ್ ಗೇಮಿಂಗ್ ವಿಚಾರವಾಗಿ ಜಗಳ ನಡೆದಿದೆ. ಮಾತು ಹೆಚ್ಚಾದಂತೆ ತೀವ್ರ ವಿಕೋಪಕ್ಕೆ ಕಾರಣವಾಯಿತು. ಬಸವಪುರಂನ ಯುವಕ ಮನೆಗೆ ಹೋಗಿ ಗಲಾಟೆ ವಿಚಾರವನ್ನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ತಿಳಿಸಿದ್ದಾನೆ. ಇದರಿಂದ ಬಸವಪುರದ ಸುಮಾರು 50 ಮಂದಿ ಬುಧವಾರ ರಾತ್ರಿ ಗಾಜುಲಪಲ್ಲೆ ಗ್ರಾಮಕ್ಕೆ ಬಂದು ಗ್ರಾಮದ ಕೆಲ ಯುವಕರ ಕುಟುಂಬದ ಸದಸ್ಯರ ಮೇಲೆ ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮನೆ ಬಾಗಿಲುಗಳು ಮುರಿದಿದ್ದಲ್ಲದೆ, ಆಸ್ತಿ-ಪಾಸ್ತಿ ನಷ್ಟವಾಗಿದೆ. ದಾಳಿ ನಡೆಯುತ್ತಿರುವಾಗ, ಮಾಹಿತಿ ಪಡೆದ ಪೊಲೀಸರು ತಕ್ಷಣ ಪಡೆಯೊಂದಿಗೆ ಗ್ರಾಮವನ್ನು ತಲುಪಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರೂ ಯುವಕರಿಂದಾಗಿ ಎರಡು ಗ್ರಾಮಗಳು ಕಾದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದೀಗ ಈ ಘಟನೆ ವೈರಲ್ ಆಗಿದ್ದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.