ಮೊಬೈಲ್ ಕಳ್ಳತನ ಪ್ರಕರಣ: ಜಿಲ್ಲಾಸ್ಪತ್ರೆ ಭದ್ರತಾ ಸಿಬ್ಬಂದಿಗಳ ವಿರುದ್ಧ ದೂರು ದಾಖಲು

ಹೊಸದಿಗಂತ ಹಾಸನ :

ಮೊಬೈಲ್‌ ಕಳ್ಳತನ ಆರೋಪಡಿ ವ್ಯಕ್ತಿ ಒಬ್ಬನ ಮೇಲೆ ಜಿಲ್ಲಾಸ್ಪತ್ರೆ ಭದ್ರತಾ ಸಿಬ್ಬದಿಗಳು ಮನೋಸ್ಸೋ ಇಚ್ಚೆ ಹಲ್ಲೆ ನಡೆಸಿದ ಮೂವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಆರೋಪಿಗೆ ಭದ್ರತಾ ಸಿಬ್ಬಂದಿಗಳು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ತೀವ್ರವಾಗಿ ಥಳಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ಇದೀಗ ಭದ್ರತಾ ಸಿಬ್ಬಂದಿಗಳಾದ ಸತೀಶ್, ಪ್ರಕಾಶ್, ಡಿ.ಎ.ಆರ್ ಪೊಲೀಸ್ ಸಿಬ್ಬಂದಿಯಾದ ರಾಜು ರೋಡಗಿ ಹಲ್ಲೆ ನಡೆಸಿದ ಮೂವರು ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ನಗರದ ಜಿಲ್ಲಾಸ್ಪತ್ರೆಗೆ ಶನಿವಾರ ಮಧ್ಯ ರಾತ್ರಿ ೧.೩೦ ರ ಸಮಯದಲ್ಲಿ ವಾರ್ಡ್ ಪ್ರವೇಶಿಸಿದ ವ್ಯಕ್ತಿಯು ಮಹಿಳೆಯ ಬಳಿ ಇದ್ದ ಮೊಬೈಲ್ ಕಳವು ಮಾಡಿದ್ದ ಎಂದು ಆರೋಪಿಸಿ ಖಾಸಗಿ ಭದ್ರತಾ ಸಿಬ್ಬಂದಿಲಿಬ್ಬರು ಆಸ್ಪತ್ರೆ ಆವರಣದಲ್ಲಿ ಮತ್ತೆ ಕೊಠಡಿಯಲ್ಲಿ ಆರೋಪಿ ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲೇ ಇಬ್ಬರು ತೀವ್ರವಾಗಿ ಥಳಿಸಿದ್ದಾರೆ. ಕೊಠಡಿಯಲ್ಲಿ ಥಳಿಸಿದ್ದು ಸಾಲದು ಎಂಬತೆ ಆಸ್ಪತ್ರೆ ಹೊರಗಡೆ ರಸ್ತೆಯಲ್ಲಿ ಮಳೆಯ ನಡುವೆಯೂ ಲಾಠಿಯಿಂದ ತೀವ್ರವಾಗಿ ಥಳಿಸಿದ್ದರು.

ಮೊಬೈಲ್ ಕಳವು ಆರೋಪಿ ಈ ಹಿಂದೆಯೂ ಸಿಕ್ಕಿಕೊಂಡಾಗ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಈ ಬಾರಿ ಪೊಲೀಸರಿಗೆ ಹಸ್ತಾಂತರಿಸಿದೆವು ಎಂದು ಭದ್ರತಾ ಸಿಬ್ಬಂದಿಗಳು ತಿಳಿಸಿದ್ದು, ಹಲ್ಲೆ ನಡೆಸಿದವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ ತಿಳಿಸಿದ್ದಾರೆ. ಮತ್ತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಮೂವರ ವಿರುದ್ಧ ಸಹ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಹಲ್ಲೆಗೊಳಗಾದ ವ್ಯಕ್ತಿಯ ಬಗ್ಗೆ ಸಹ ವಿಚಾರಣೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!