ಹೊಸದಿಗಂತ ಕಾರವಾರ :
ಕೇಂದ್ರ ಗೃಹ ಇಲಾಖೆ ಸೂಚನೆಯ ಮೇರೆಗೆ ಕಾರವಾರದ ಮಲ್ಲಾಪುರದಲ್ಲಿ ಮತ್ತು ರಾಯಚೂರಿನ ಶಕ್ತಿ ನಗರದಲ್ಲಿ ಬುಧವಾರ ಸಂಜೆ ನಡೆಯಲಿರುವ ಮಾಕ್ ಡ್ರಿಲ್ ಮುಂದೂಡಿಕೆ ಆಗಿದೆ.
ಸರ್ವ ಸಿದ್ದ ತೆಗಳು ಮುಗಿದ ನಂತರದಲ್ಲಿ ಮುಂದಿನ ವಾರ ಮಾಕ್ ಡ್ರಿಲ್ ನಡೆಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಾರವಾರದಲ್ಲಿ ಮಂಗಳವಾರ ಸಂಜೆ ಎಸ್ಪಿ ನಾರಾಯಣ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಸರ್ಕಾರದಿಂದ ಕಾರವಾರದ ಮಲ್ಲಾಪುರದಲ್ಲಿ ಮಾಕ್ ಡ್ರಿಲ್ ಗೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಸಭೆ ಸೇರಿ ಸಿದ್ಧತೆ ಆರಂಭ ಮಾಡಲಾಗಿದೆ. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದ್ದು ರಾತ್ರಿ ಸೈರನ್ ಮೊಳಗಿದಾಗ ಎಲ್ಲ ಲೈಟ್ ಬಂದ್ ಮಾಡಿ ಬ್ಯ್ಲಾಕ್ ಔಟ್ ಮಾಡಬೇಕು.ಅಗ್ನಿ ಅವಘಡದಲ್ಲಿ ಜನರನ್ನು ರಕ್ಷಿಸುವ , ಕಡಲತೀರದಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಬೇಕಿದೆ. ಇದಕ್ಕೆಲ್ಲ ಸಿದ್ಧತೆ ನಡೆದಿದ್ದು ಮುಂದಿನ ವಾರ ನಿಗದಿತ ದಿನದಂದು ಮಾಕ್ ಡ್ರಿಲ್ ಮಾಡಲಾಗುವುದು ಎಂದರು.
ರಾಯಚೂರಿನಲ್ಲಿ :
ಬುಧವಾರ ರಾಯಚೂರು ಜಿಲ್ಲೆಯ ಶಕ್ತಿ ನಗರದಲ್ಲಿ ಜರುಗಬೇಕಿದ್ದ ಮಾಕ್‌ಡ್ರಿಲ್ ಕಾರ್ಯಕ್ರಮವನ್ನು ಸಿದ್ಧತೆ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ ಎಂದು ಜಿಲ್ಲಾಧಿಕಾರಿ ನಿತೀಶ ಕೆ. ತಿಳಿಸಿದ್ದಾರೆ.