February 3, 2026
Tuesday, February 3, 2026
spot_img

ಮಾಡೆಲ್ ಹೌಸ್ ಗೆ ಬೆಂಕಿ | ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜನಾರ್ದನ ರೆಡ್ಡಿ

ಹೊಸದಿಗಂತ ವರದಿ ಬಳ್ಳಾರಿ:

ನಮ್ಮ ಒಡೆತನದ ಮಾಡೆಲ್ ಹೌಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿಲ್ಲ, ಇದರಿಂದ ಅವರಿಗೇನು ಲಾಭ, ಇಂದೊಂದು ರಾಜಕೀಯ ಪ್ರೇರಿತ ಕೃತ್ಯ, ಮಂಗಳವಾರ ಸದನದಲ್ಲಿ ಈ ಕುರಿತು ಪ್ರಸ್ಥಾಪಿಸುವೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮನೆಗೆ ಬೆಂಕಿ ಹಚ್ಚಿದ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಸುಮನ್ ಪೆನ್ನೇಕರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಈ ಪ್ರದೇಶದಲ್ಲಿ ಸೆಕ್ಯೂರಿಟಿ ಇಲ್ಲ ಎನ್ನುವುದು ತಪ್ಪು, ಬೆಂಕಿ ಹಚ್ಚಿ ಓಡಿ ಹೋಗುತ್ತಿರುವ ಕುರಿತು ನಮ್ಮ ಹುಡುಗರು ವಿಡಿಯೋ ಮಾಡಿದ್ದಾರೆ. ಮಾಡೆಲ್ ಹೌಸ್ ಇದು, ಇಲ್ಲಿ ವಾಸ ಮಾಡುತ್ತಿಲ್ಲ. ನಗರ ಶಾಸಕ ನಾರಾ ಭರತ್ ರೆಡ್ಡಿ ಕುಮ್ಮಕ್ಕಿನಿಂದಲೆ ನಡೆದಿದ್ದು, ಬೆರೆ ಯಾರು ಮಾಡಿಲ್ಲ. ಕಳೆದ ಮೂರು ಮೂರು ತಿಂಗಳ ಹಿಂದೆ ಲೇಔಟ್ ನಲ್ಲಿ ಕಳ್ಳತನ ಮಾಡಿರೋ ಬಗ್ಗೆ ದೂರು ನೀಡಲಾಗಿತ್ತು. ಆದರೆ, ಬಂಧಿಸಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಿಸಿದ್ದು, ಭರತ್ ರೆಡ್ಡಿ ಹಾಗೂ ಎ ಎಸ್ಪಿ ರವಿ ಕುಮಾರ್. ಕಳ್ಳತನ ಮಾಡಿಸಿರುವುದು ಭರತ್ ರೆಡ್ಡಿ ಬೆಂಬಲಿಗರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಡುಗರು ಗಾಂಜಾ ಹೊಡೆದಿದ್ದು, ಅವರನ್ನು ತಪಾಸಣೆ ಮಾಡಿಸಬೇಕು, ಮಂಗಳವಾರದ ಸದನದಲ್ಲಿ ಚರ್ಚೆ ಮಾಡುವೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಚರ್ಚೆ ಮಾಡುವೆ. ಸಿ.ಎಂ.ಸಿದ್ದರಾಮಯ್ಯ ಅವರು 7 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ ಅಂತಾರೆ, ಈಗ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದರು.

ಬ್ಯಾನರ್ ಗಲಾಟೆ ಪ್ರಕರಣವನ್ನು ಹಾಗೂ ಈ ಘಟನೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಎಸ್ಪಿ ಅವರು, ಇಲ್ಲಿ ಯಾರೂ ವಾಸವಿಲ್ಲ, ಪಾಳು ಬಿದ್ದ ಕಟ್ಟಡ ಎಂದು ತಪ್ಪು ಹೇಳಿಕೆ ಕೊಡಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರವಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಬಿಜೆಪಿ ನಗರ ಅಧ್ಯಕ್ಷ ಜಿ.ವೆಂಕಟರಮಣ ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !