June 5, 2026
Friday, June 5, 2026
spot_img

ಚಿನ್ನ ಬೆಳ್ಳಿ ಕಳ್ಳತನ ಮಾಡೋ ಕಾಲ ಮುಗಿತು ಅನ್ಸುತ್ತೆ: ಯಾಕೆ ಅಂತೀರಾ ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಹಬ್ಬದ ದಿನವೇ ಗೃಹ ಬಳಕೆ ಸಿಲಿಂಡರ್‌ಗಳನ್ನು ಕದ್ದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೇಗೂರು ಪ್ರದೇಶದ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರು ಯುವಕರು ಹಾಡಹಗಲೇ ಕಳ್ಳತನ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಧ್ಯಾಹ್ನ ವೇಳೆಯಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಅಪಾರ್ಟ್ಮೆಂಟ್‌ಗೆ ಪ್ರವೇಶಿಸಿದ್ದಾರೆ. ಒಬ್ಬ ಹೊರಗಡೆ ನಿಂತಿದ್ದರೆ, ಮತ್ತೊಬ್ಬ ಒಳಗೆ ಹೋಗಿ ಎರಡು ಗೃಹಬಳಕೆ ಸಿಲಿಂಡರ್‌ಗಳನ್ನು ಎತ್ತಿಕೊಂಡು ಯಾವುದೇ ಅನುಮಾನ ಬಾರದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ:

ಈ ಘಟನೆ ಆರ್‌ಸಿ ಲೇಔಟ್‌ನ ವಿಶ್ವಪ್ರಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದ್ದು, ನಿವಾಸಿಗಳು ಶಾಕ್ ನಲ್ಲಿದ್ದಾರೆ. ಸಿಲಿಂಡರ್ ಕೊರತೆಯ ನಡುವೆ ಈ ರೀತಿಯ ಕಳ್ಳತನ ನಡೆದಿರುವುದು ಆತಂಕ ಹೆಚ್ಚಿಸಿದೆ.

ಸಿಲಿಂಡರ್ ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಗೆ ಮನೆ ಮಾಲೀಕರು ದೂರು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !