ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ರಾಮಾಯಣ ಆಧಾರಿತ ಸಿನಿಮಾ ಇದಾಗಿದ್ದರಿಂದ ಸಾಕಷ್ಟು ನಿರೀಕ್ಷೆಯನ್ನು ಜನ ಇಟ್ಟುಕೊಂಡಿದ್ದರು.
ಈ ಹಿಂದೆ ತಂಡ ಟ್ರೇಲರ್ ರಿಲೀಸ್ ಮಾಡಿದಾಗಲೂ ಮಕ್ಕಳ ಕಾರ್ಟೂನ್ ರೀತಿಯ ಅನಿಮೇಷನ್ಸ್ ಎನ್ನುವ ಮಾತು ಎದುರಾಗಿತ್ತು. ಆದರೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುವಂತೆ ಚಿತ್ರ ತಂಡ ಹೈಪ್ ನೀಡಿದೆ.
ಇದೀಗ ಸಿನಿಮಾ ರಿಲೀಸ್ ಆದಮೇಲೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಪಕ್ಕಾ ಫ್ಲಾಪ್ ಅನ್ನೋದು ಜನರ ಅಭಿಪ್ರಾಯ. 600 ಕೋಟಿ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡಿದ್ದೀರಿ, ನಮ್ಮ ಜನಸಂಖ್ಯೆ 150 ಕೋಟಿ ಇದೆ. ಈ ಸಿನಿಮಾ ಮಾಡೋ ಬದಲು ಜನರಿಗೆ ದುಡ್ಡು ಕೊಟ್ಟಿದಿದ್ದರೆ ಜನರ ಬಡತನವಾದ್ರೂ ನಿವಾರಣೆ ಆಗುತ್ತಿತ್ತು ಎಂದಿದ್ದಾರೆ.
ಮಾರ್ಡನ್ ಹೇರ್ ಕಟ್‌ಗಳು, ಟ್ಯಾಟೂಗಳು, ಕೆಟ್ಟ ಡೈಲಾಗ್ಸ್, ಚೀಪ್ ಅನಿಮೇಷನ್ ಒಂಥರಾ ಟಿಕ್‌ಟಾಕ್ ನೋಡಿದಂಥ ಅನುಭವಾಗಿದೆ ಎಂದು ಟ್ರೋಲ್ ಮಾಡಲಾಗಿದೆ.