ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಲು ಇಡೀ ದೇಶವೇ ಕಾತರಿಂದ ಕಾಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗಾಂಧಿನಗರದಲ್ಲಿ ವಿವಿಧ ಯೋಜನೆ ಮತ್ತು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶವು ಮುಂದಿನ ಬಾರಿಯೂ ಮೋದಿ ಅವರೇ ಪ್ರಧಾನಿ ಆಗಿ ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟ ಸಂದೇಶ ಸಾರಿದೆ ಎಂದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಗುಜರಾತ್ ಮತ್ತು ಬಿಜೆಪಿಗೆ ಅವಮಾನಿಸಲು ಯತ್ನಿಸಿದವರಿಗೆ ಜನರೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಆಪ್ ಮತ್ತು ಕಾಂಗ್ರೆಸ್ಗೆ ಶಾ ಟಾಂಗ್ ನೀಡಿದರು.