ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಖುದ್ದು ರಾಜಮಾತೆಯವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರವನ್ನು ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರ ನಿವಾಸದಲ್ಲಿ ಕೈಗೊಳ್ಳಲಿದ್ದಾರೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಮತ್ತು ಆದ್ಯವೀರ್ ಒಡೆಯರ್ ಉಪಹಾರದಲ್ಲಿ ಮೋದಿ ಅವರ ಜೊತೆಯಾಗಲಿದ್ದಾರೆ.
ಪ್ರಧಾನಿತವರಿಗಾಗಿಯೇ ವಿಶೇಷವಾಗಿ ಮೈಸೂರು ಪಾಕ್ ತಯಾರಿಸಲಾಗಿದ್ದು, ಮೈಸೂರು ಅರಸರ ಕಾಲದಿಂದಲೂ ಮೈಸೂರು ಪಾಕ್ ತಯಾರಿಸುತ್ತಿದ್ದ ಕುಟುಂಬದವರು, ಮೋದಿ ಅವರಿಗಾಗಿ ಈ ಬಾರಿ ವಿಶೇಷವಾಗಿ ಮೈಸೂರು ಪಾಕ್ ತಯಾರಿಸಿದ್ದಾರೆ.