ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕ(ಆತ್ಮಚರಿತ್ರೆ)ದಲ್ಲಿನ ವಿಷಯಗಳಿಗೆ “ಭಯ” ಪಟ್ಟು ಮೋದಿ ಲೋಕಸಭೆಗೆ ಬಂದಿಲ್ಲ ಎಂದು ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಿಂದ ಪ್ರಧಾನಿಗೆ ಭದ್ರತಾ ಬೆದರಿಕೆ ಇತ್ತು ಎಂಬ ಹೇಳಿಕೆಯನ್ನು ತಳ್ಳಿಹಾಕಿದ್ದು, ಆರೋಪ ಮಾಡುವ ಬದಲು ಕ್ರಮ ಕೈಗೊಳ್ಳಬೇಕು ಎಂದು ಸವಾಲು ಹಾಕಿದರು.
ಯಾರಾದರೂ ಪ್ರಧಾನಿ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದರೆ. ದಯವಿಟ್ಟು ಎಫ್‌ಐಆರ್ ಮಾಡಿ, ಆ ವ್ಯಕ್ತಿಯನ್ನು ಬಂಧಿಸಿ. ನೀವು ಅದನ್ನು ಏಕೆ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಪ್ರಧಾನಿ ಸದನಕ್ಕೆ ಬರಲು ಹೆದರುತ್ತಿದ್ದರು. ಸದಸ್ಯರ ಕಾರಣದಿಂದಾಗಿ ಅಲ್ಲ, ನಾನು ಹೇಳುತ್ತಿದ್ದ ಪುಸ್ತಕದ ಕಾರಣದಿಂದ. ಮೋದಿ ಇನ್ನೂ ಭಯಭೀತರಾಗಿದ್ದಾರೆ. ಏಕೆಂದರೆ ಅವರು ಸತ್ಯವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಗಾಂಧಿ ಗಾಂಧಿ ತಿಳಿಸಿದರು.



