Sunday, September 21, 2025

ನವರಾತ್ರಿ ಸಂಭ್ರಮದ ಜೊತೆ ಬಡ, ಮಧ್ಯಮ ವರ್ಗದವರಿಗೆ ಜಿಎಸ್‌ಟಿ ಕಡಿತದ ಸಿಹಿ ಹಂಚಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯೊಂದಿಗೆ ಭಾರತ ಆತ್ಮನಿರ್ಭರತೆಯೊಂದಿಗೆ ಸಾಗುವ ಮಹತ್ವದ ನಿರ್ಧಾರದೊಂದಿದೆ ಸಾಗುತ್ತಿದೆ. ನಾಳೆಯಿಂದ ಮುಂದಿನ ಪೀಳಿಗೆಯ ಜಿಎಸ್‌ಟಿ ಪರಿಷ್ಕರಣೆ ಜಾರಿಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಿಸಿ, ನವರಾತ್ರಿಯಿಂದ ಹೊಸ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹೊಸ ನೀತಿಯಿಂದ ನಿಮ್ಮ ಆರ್ಥಿಕತೆ ಸಶಕ್ತವಾಗಲಿದೆ. ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಬಡವರು, ಮಧ್ಯಮವರ್ಗ, ವ್ಯಾಪಾರಿ, ಮಹಿಳೆಯರು, ಉದ್ಯಮಗಳು ಸೇರಿದಂತೆ ಎಲ್ಲರಿಗೂ ಜಿಎಸ್‌ಟಿ ಕಡಿತ ಸಿಹಿಯನ್ನು ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

ಈ ಪರಿಷ್ಕರಣೆ ಭಾರತದ ಬೆಳವಣಿಗೆ ವೇಗವನ್ನು ಮತ್ತಷ್ಟು ಹೆಚ್ಚಲಿದೆ. ಭಾರತದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲಿದೆ. ಪ್ರತಿ ರಾಜ್ಯವನ್ನೂ ಸಬಲೀಕರಣ ಮಾಡಲಿದೆ. ನಮ್ಮ ದೇಶದ ಪ್ರತಿಯೊಬ್ಬರಿಗೂ ಈ ಜಿಎಸ್‌ಟಿ ಲಾಭ ಸಿಗಲಿದೆ. ಪ್ರತಿಯೊಬ್ಬರು ಹಲವು ತೆರಿಗೆ ನೀಡುತ್ತಾ ಹೈರಾಣಾಗಿದ್ದರು. ಎಲ್ಲಾ ತೆರಿಗೆಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಅದನ್ನು ನಾವು ಬದಲಾಯಿಸಿದ್ದೇವೆ. ಇದೀಗ ಒಂದು ದೇಶ ಒಂದು ತೆರಿಗೆ ಕನಸು ನನಸಾಗಿದೆ. ಜನರ ಹಿತ, ದೇಶದ ಹಿತ ಜಿಎಸ್‌ಟಿಯಲ್ಲಿ ಅಡಗಿದೆ. ಹಿಂದೆಲ್ಲ ಬೆಂಗಳೂರಿನಿಂದ ಯುರೋಪ್‌ಗೆ ಉತ್ಪನ್ನ ಕಳಿಸಲು ಕಷ್ಟವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಔಷಧ, ಹಾಲು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಅಗ್ಗವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ