ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಭಾರತ ಉದ್ವಿಗ್ನತೆಯ ವಿಚಾರದಲ್ಲಿ ದೇಶದ ರಾಜಕೀಯ ಪಕ್ಷಗಳ ಮಾತಿನ ವರಸೆ ಆರಂಭವಾಗಿದೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಮಯ ಸಂಧಾನದ ಮಾತನ್ನುಆಡುತ್ತಿದ್ದರು. ಆದರೆ, ಯಾವಾಗ ಟ್ರಂಪ್ ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎನ್ನುವ ಟ್ವೀಟ್ ಭಾರೀ ಸಂಚಲನವನ್ನು ಮೂಡಿಸಿತು. ಇತ್ತ ಮೋದಿ ಸರ್ಕಾರದ ಪರವಿರೋಧ ಚರ್ಚೆಗಳು ಜೋರಾಗಿ ನಡೆಯಲಾರಂಭಿಸಿತು.
ಕಾಂಗ್ರೆಸ್ ಸೇರಿದಂತೆ ಹಲವು ನಾಯಕರಿಂದ, 1971ರ ಇಂದಿರಾ ಗಾಂಧಿ ಕಾಲದ ಯುದ್ದ, ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದು, ನರೇಂದ್ರ ಮೋದಿ ಈಗಿನ ಪರಿಸ್ಥಿತಿಯನ್ನು ನಿಭಾಯಿಸಿದ್ದು ಎನ್ನುವ ತುಲನೆಗಳು ಆರಂಭವಾದವು. ಸಾಲುಸಾಲು ಕಾಂಗ್ರೆಸ್ ನಾಯಕರು, ಮೋದಿ ವಿರುದ್ದ ವಾಗ್ದಾಳಿ ನಡೆಸಲಾರಂಭಿಸಿದರು. ಆದಾಗ್ಯೂ, ನಾಲ್ವರು ಹಿರಿಯ ಕಾಂಗ್ರೆಸ್ ನಾಯಕರು ಮೋದಿ ಸರ್ಕಾರದ ಪರವಾಗಿ ಹೇಳಿಕೆಯನ್ನು ನೀನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಹೇಳಿಕೆಯ ಬಗ್ಗೆ ನಾನು ಬಹಿರಂಗವಾಗಿ ಏನನ್ನೂ ಮಾತನಾಡುವುದಿಲ್ಲ ಎಂದು ರಾಜ್ಯಸಭೆಯ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಇದೊಂದು ಸೆನ್ಸಿಟೀವ್ ವಿಚಾರ. ನಾವು ನಮ್ಮ ಪ್ರಧಾನಿಯವರ ಮಾತನ್ನು ನಂಬಬೇಕಾಗುತ್ತದೆ. ಕದನ ವಿರಾಮ ಮತ್ತು ಟ್ರಂಪ್ ವಿಚಾರದ ಬಗ್ಗೆ ವಿಶೇಷ ಅಧಿವೇಶನ ಮತ್ತು ಸರ್ವಪಕ್ಷಗಳ ಸಭೆಯನ್ನು ಕರೆಯಲು ಒತ್ತಾಯಿಸಿದ್ದೇವೆ, ಅಲ್ಲಿ ನಾವು ಮಾತನಾಡುತ್ತೇವೆ ಎಂದಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್,ಉಗ್ರರಿಗೆ ಏನು ಪಾಠ ಭಾರತದ ನೆಲದಿಂದ ಹೋಗಬೇಕೋ ಅದು ಹೋಗಿದೆ. ಕೇಂದ್ರ ಸರ್ಕಾರ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ. 1971ರ ಪರಿಸ್ಥಿತಿಯೂ ಈಗಿನ ಪರಿಸ್ಥಿತಿಯೂ ಒಂದೇ ಅಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಭಾರತ ಎಂದಿಗೂ ದೀರ್ಘ ಕಾಲ ಯುದ್ದವನ್ನು ಬಯಸುವುದಿಲ್ಲ, ನಮ್ಮ ತಂಟೆಗೆ ಬಂದರೆ ಏನಾಗುತ್ತದೆ ಎನ್ನುವುದನ್ನು ತೋರಿಸಬೇಕಿತ್ತು, ಆ ಕೆಲಸ ಆಗಿದೆ ಎಂದು ಮೋದಿ ಸರಕಾರದ ನಡೆಯನ್ನು ಸಮರ್ಥಿಸಿದ್ದಾರೆ.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ, ಪ್ರಧಾನಿಯವರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕೇಳಿದ್ದೇನೆ, ಉಗ್ರರ ವಿರುದ್ದ ಅವರ ಮಾತು ಸರಿಯಾಗಿಯೇ ಇದೆ. ಮೋದಿ, ಸರಿಯಾದ ಎಚ್ಚರಿಕೆಯನ್ನು ಪಾಕಿಸ್ತಾನ ಮತ್ತು ಉಗ್ರರಿಗೆ ಕೊಟ್ಟಿದ್ದಾರೆ. ಅವರ ಕ್ರಮ ನನಗೆ ಸರಿಯಾಗಿಯೇ ಇದೆ ಅನಿಸಿತು. ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯ ಮಾತನ್ನು ಆಡುತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿ ಮೋದಿಯವರು ಅದನ್ನು ಅಲ್ಲಗಳೆದಿದ್ದಾರೆ. ಮೋದಿಯವರು ಟ್ರಂಪ್ ಮನೆ ಬಾಗಿಲಿಗೆ ಹೋಗಿದ್ರಾ? ನನಗೆ ಟ್ರಂಪ್ ಗಿಂತ ನಮ್ಮ ಪ್ರಧಾನಿ ಮಾತಿನ ಮೇಲೆಯೇ ನಂಬಿಕೆ ಎಂದಿದ್ದಾರೆ.
ಅದೇ ರೀತಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಕೂಡ ಏನೇ ಭಿನ್ನಾಭಿಪ್ರಾಯವಿರಲಿ, ರಕ್ತ ಮತ್ತು ನೀರು ಒಂದೇ ಕಡೆ ಸಾಗಲು ಸಾಧ್ಯವಿಲ್ಲ ಎನ್ನುವ ಪ್ರಧಾನಿಗಳ ಮಾತಿಗೆ ನನ್ನ ಸಹಮತವೂ ಇದೆ. ಪಾಕಿಸ್ತಾನದ ಪ್ರಾಯೋಜಿತ ಉಗ್ರ ಕೃತ್ಯಕ್ಕೆ ಕಠಿಣವಾದ ತಿರುಗೇಟು ನೀಡಬೇಕಿತ್ತು. ಆ ವಿಚಾರದಲ್ಲಿ, ಮೋದಿ ಸರ್ಕಾರದ ಆಕ್ರಮಣಕಾರೀ ನೀತಿಯನ್ನೇ ಪಾಲಿಸಿದೆ. ಇನ್ನು, ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಮೋದಿಯವರೇ ಸ್ಪಷ್ಟನೆಯನ್ನು ನೀಡಬೇಕು ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ನಡೆಯನ್ನು ಬೆಂಬಲಿಸಿದ್ದಾರೆ.