ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಯಲ್ಲಿ (Varanasi) ಬೃಹತ್ ರೋಡ್ ಶೋ ಮೂಲಕ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ.
ಸತತ ಮೂರನೇ ಬಾರಿಗೆ ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೋದಿ ಅವರು ಮಂಗಳವಾರ (ಏಪ್ರಿಲ್ 14) ನಾಮಪತ್ರ ಸಲ್ಲಿಸಿದ್ದು, ಇದಕ್ಕೂ ಮೊದಲು ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ವಾರಾಣಸಿಯ ಬನಾರಸ್ ವಿವಿ ಗೇಟ್ನಿಂದ ಕಾಶಿ ವಿಶ್ವನಾಥ ಧಾಮದ 4ನೇ ಗೇಟ್ವರೆಗೆ 6 ಕಿಲೋಮೀಟರ್ ರೋಡ್ ಶೋ ಕೈಗೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ರೋಡ್ ಶೋಗೆ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.
ಮೋದಿ ರೋಡ್ ಶೋ ಉದ್ದಕ್ಕೂ ಜೈ ಶ್ರೀರಾಮ್ ಎಂಬುದು ಸೇರಿ ಹಲವು ಘೋಷಣೆಗಳು ಮೊಳಗಿದವು.
ಕೇಸರಿ ದಿರಸು ಧರಿಸಿದ ಕಲಾವಿದರು ರೋಡ್ ಶೋಗೆ ಹೊಸ ಮೆರುಗು ತಂದರು.