ಹೊಸದಿಗಂತ ಡಿಜಿಟಲ್ ಡೆಸ್ಕ್:
10 ದಿನಗಳ ಹಿಂದೆ ವಾಟ್ಸಾಪ್ ಚಾನಲ್ ಗೆ ಲಗ್ಗೆ ಇಟ್ಟ ಪ್ರಧಾನಿ ಮೋದಿ 5.2 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಗರಿಷ್ಠ ಹಿಂಬಾಲಕರ ಪಡೆದ ವಿಶ್ವದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 14ರಂದು ಪ್ರಧಾನಿಗಳು ಮೊದಲ ಬಾರಿಗೆ ವಾಟ್ಸಾಪ್ಗೆ ಅಡಿ ಇಟ್ಟಿದ್ದರು. ಇವತ್ತು 11 ದಿನಗಳ ಬಳಿಕ ಅವರ ಫಾಲೋಯರ್ಸ್ ಸಂಖ್ಯೆ 53 ಲಕ್ಷ ಮುಟ್ಟಿದೆ.
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಗಳ ಬಳಗ ಹೊಂದಿರುವ ವಿಶ್ವನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರು. ಇವರ ಟ್ವಿಟ್ಟರ್ ಮತ್ತು ಫೇಸ್ವುಕ್ ಖಾತೆಗಳಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಫಾಲೋಯರ್ಸ್ ಇದ್ದಾರೆ. ಈಗ ವಾಟ್ಸಾಪ್ ಚಾನಲ್ನಲ್ಲೂ ಅವರ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದೆ.
ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಒಂದು ವಾರದಲ್ಲಿ 5.2 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಈ ಮೂಲಕ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಫಾಲೋವರ್ಸ್ ಪಡೆದ ವಿಶ್ವದ ನಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.
5 ಮಿಲಿಯನ್ ಫಾಲೋವರ್ಸ್ ಪಡೆಯುತ್ತಿದ್ದಂತೆ ಪ್ರಧಾನಿ ಮೋದಿ ಕಮ್ಯೂನಿಟಿ ಬಳಕೆದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಾವೀಗ 50 ಲಕ್ಷ ಬಳಗ ಸೇರಿದ್ದೇವೆ. ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಸಂಪರ್ಕದಲ್ಲಿರುವ ಎಲ್ಲರಿಗೂ ಧನ್ಯವಾದ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಬೆಂಬಲ, ಸಹಕಾರಕ್ಕೆ ನಾನು ಋಣಿಯಾಗಿದ್ದೇನೆ. ಈ ಸಂವಹನ ಮುಂದುವರಿಯುತ್ತದೆ. ಈ ಅದ್ಭುತ ತಾಣದಲ್ಲಿ ಇದೇ ರೀತಿ ಸಂಪರ್ಕದಲ್ಲಿರಿ ಎಂದು ಮೋದಿ ಮನವಿ ಮಾಡಿದ್ದಾರೆ.
ವಾಟ್ಸಾಪ್ ಚಾನಲ್ನಲ್ಲಿ ಯಾವ ವ್ಯಕ್ತಿಗಳಿಗೆ ಎಷ್ಟು ಫಾಲೋಯರ್ಸ್?
ಕತ್ರಿನಾ ಕೈಫ್: 1.27 ಕೋಟಿ
ಮಾರ್ಕ್ ಜುಕರ್ಬರ್ಗ್: 82 ಲಕ್ಷ
ಅಕ್ಷಯ್ ಕುಮಾರ್: 70 ಲಕ್ಷ
ನರೇಂದ್ರ ಮೋದಿ: 53 ಲಕ್ಷ
ಒಲಿವಿಯಾ ರೋಡ್ರಿಗೋ: 51 ಲಕ್ಷ
ದಿಲ್ಜಿತ್ ದೋಸಾಂಜ್: 48 ಲಕ್ಷ
ಸನ್ನಿ ಲಿಯೋನೆ: 42 ಲಕ್ಷ
ಸೋನಾಲಿ ಸಿಂಗ್: 25 ಲಕ್ಷ
ಅಸ್ಲಿ ಮೋನಾಲೀಸ: 23 ಲಕ್ಷ
ಪಂಕಜ್ ಭದೂರಿಯಾ: 20 ಲಕ್ಷ