ಮೋದಿ ವ್ಯಕ್ತಿಯಲ್ಲ , ಅವರೊಬ್ಬ ದೇಶದ ಶಕ್ತಿ ಇದ್ದಂತೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಹೊಸ ದಿಗಂತ ವರದಿ, ಬಳ್ಳಾರಿ:

ಯಾವುದೇ ಕಾಮಗಾರಿಗಳಿರಲಿ, ಈ ಹಿಂದೆ ಶಂಕುಸ್ಥಾಪನೆ ಒಬ್ಬರು, ಉದ್ಘಾಟನೆ ಒಬ್ಬರು ಮಾಡುತ್ತಿದ್ದರು. ಆದರೇ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅದನ್ನು ಬದಲಾಯಿಸಿದ್ದು, ಶಂಕುಸ್ಥಾಪನೆ ಅವರೇ, ಉದ್ಘಾಟನೆಯನ್ನು ಅವರೇ ಮಾಡುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ದೇಶದ ಸಂಸತ್ ‌ಭವನವನ್ನು ಮೋದಿ ಅವರೇ ಶಿಲಾನ್ಯಾಸ‌ ನೆರವೇರಿಸಿದ್ದರು, ಅವರೇ ಉದ್ಘಾಟಿಸಿದರು. ಮೈಸೂರು ದಶಪಥ ರಸ್ತೆ ಕಾಮಗಾರಿಗೆ ಮೊದಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು, ನಂತರ ಅವರೇ ಉದ್ಘಾಟಿಸಿದರು, ಇದರಂತೆ ದೇಶದಲ್ಲಿ ನಾನಾ ಕಡೆ ಕೈಗೆತ್ತಿಕೊಂಡ‌ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅವರೇ ಚಾಲನೆ ನೀಡಿ, ಅವರೇ ಉದ್ಘಾಟಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ, ಮೋದಿ ಅವರು ವ್ಯಕ್ತಿಯಲ್ಲ ಅವರೋಬ್ಬ ದೇಶದ ಶಕ್ತಿ ಇದ್ದಂತೆ ಎಂದರು.

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ನಿತ್ಯ 11ಕಿ.ಮೀ.ಹೆದ್ದಾರಿಗಳು ನಿರ್ಮಾಣಗೊಂಡಿದ್ದರೇ, ಕಾಂಗ್ರೆಸ್ ನ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 4 ಕಿ.ಮೀ.ನಿರ್ಮಾಣಗೊಂಡಿದ್ದು, ಮೋದಿ ಅವರ ಅವಧಿಯಲ್ಲಿ ನಿತ್ಯ 31 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ, ಇದು ಮೋದಿ ಅವರ ತಾಕತ್ತು, ಕಳೆದ 9 ವರ್ಷಗಳ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ, ಇಡೀ ಜಗತ್ತೇ ಭಾರತವನ್ನು ಎದ್ದು‌ ನಿಂತು‌ ನೋಡುತ್ತಿದೆ, ಭಯೋತ್ಪಾದಕ ಕೃತ್ಯಗಳಿಗೆ‌‌ ಬ್ರೇಕ್ ಬಿದ್ದಿದೆ, ನಕ್ಸಲ್ ಚಟುವಟಿಕೆಗಳಿಗೆ, ಆತಂಕವಾದಕ್ಕೆ ಕಡಿವಾಣ ಹಾಕಲಾಗಿದೆ ಎಂದರು.

ಕೇಂದ್ರ ಸರ್ಕಾರದ 9 ವರ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ ನಡೆದಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆದ ಫಲಾನುಭವಿಗಳೊಂದಿಗೆ ಸಂವಾದ, ಉದ್ಯಮಿದಾರರೊಂದಿಗೆ ಚೆರ್ಚೆ, ಸಭೆಗಳನ್ನು ನಡೆಸಲಾಗುತ್ತಿದೆ. ಈ ಕುರಿತು 7 ತಂಡಗಳನ್ನು ರಚಿಸಲಾಗಿದೆ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರಪ್ಪ, ಮಾಜಿ ಸಿ.ಎಂ.ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿ.ಎಂ.ಸದಾನಂದಗೌಡ, ಮಾಜಿ ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ನೇತೃತ್ವದ ತಂಡಗಳನ್ನು ರಚಿಸಲಾಗಿದೆ. ತಂಡದ ಸದಸ್ಯರು ರಾಜ್ಯಾದ್ಯಂತ ಸಂಚರಿಸಿ ಸರ್ಕಾರದ ಸಾಧನೆಗಳನ್ನು ಜನರಿಗೆ ಸಭೆ, ಸಮಾರಂಭಗಳನ್ನು ಆಯೋಜಿಸುವ ಮೂಲಕ ತಿಳಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೈ.ದೇವೇಂದ್ರಪ್ಪ, ವೈ.ಎಂ.ಸತೀಶ್, ಮಾಲೀಕಯ್ಯ ಗುತ್ತೆದಾರ್, ಸೋಮಶೇಖರ್ ರೆಡ್ಡಿ, ರೇಣಕಾ ಪ್ರಸಾದ್, ಶಿಲ್ಪಾ ರಾಘವೇಂದ್ರ, ಸುಮಾ ಪ್ರಕಾಶ್, ಶಶಿಲ್ ನಮೋಶಿ, ಮುರಹರಗೌಡ, ಕೆ.ರಾಮಲಿಂಗಪ್ಪ, ಐನಾಥ್ ರೆಡ್ಡಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!