ದೇಶಕ್ಕೆ ಮೋದಿಯೇ ಗ್ಯಾರೆಂಟಿ: ಸಂಸದ ಸಂಗಣ್ಣ

ಹೊಸದಿಗಂತ ವರದಿ,ಕೊಪ್ಪಳ:

ಜನತೆ ಕಾಂಗ್ರೆಸ್ ಹುಸಿ ಗ್ಯಾರೆಂಟಿಗೆ ಮನ್ನಣೆ ನೀಡದೇ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ. ಮೂರು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿದೆ. ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಗ್ಯಾರೆಂಟಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, ಕಾಂಗ್ರೆಸ್ ಹುಸಿ ಗ್ಯಾರೆಂಟಿ ಗಳನ್ನು ಘೋಷಿಸಿ ಚುನಾವಣೆ ಎದುರಿಸಿದರು. ಆದ್ದರಿಂದಲೇ ಸೋತಿದ್ದಾರೆ. ಆದರೆ, ಬಿಜೆಪಿ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ಪ್ರಚಾರ ನಡೆಸಲಾಗಿತ್ತು. ಇದರ ಪರಿಣಾಮ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಡದಲ್ಲಿ ಬಿಜೆಪಿ ಜಯ ಗಳಿಸಿದೆ ಎಂದರು.

2018 ರಲ್ಲಿ ಕಾಂಗ್ರೆಸ್ ವಶವಾಗಿದ್ದ ರಾಜಸ್ತಾನ ಹಾಗೂ ಛತ್ತೀಸ್ ಗಡ ರಾಜ್ಯವನ್ನು ಗೆದ್ದಿದ್ದೇವೆ. ಕಾಂಗ್ರೆಸ್ ಮುಕ್ತ ಭಾರತ ಆಗುವ ಕಾಲ ಸನ್ನಿಹಿತ ವಾಗಿದೆ. ತೆಲಂಗಾಣದಲ್ಲಿ ಬಿಜೆಪಿ ಇರಲಿಲ್ಲ. ಅಲ್ಲಿ ಎರಡಂಕಿ ದಾಟಿದ್ದೇವೆ. ಇಲ್ಲಿಯೂ ಕೂಡ ಬಿಜೆಪಿ ಕಮಾಲ್ ಮಾಡಿದೆ. ಸೆಮಿಫೈನಲ್‌ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಲೋಕಸಭೆ ಫೈನಲ್ ನಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!