ಹೊಸದಿಗಂತ ಡಿಜಿಟಲ್‌ಡೆಸ್ಕ್:
ಪ್ರಧಾನಿ ಮೋದಿ ತಮ್ಮ ಆಲೋಚನೆಯಲ್ಲಿ ಸ್ಪಷ್ಟಕ್ಕೆ ಹೊಂದಿದ್ದರು. ಆರ್‌ಎಸ್‌ಎಸ್‌ನಿಂದ ಬಂದಿರುವ ನರೇಂದ್ರ ಮೋದಿ, ರಾಷ್ಟ್ರೀಯತೆ ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದರು. ಇಂದಿರಾ ಗಾಂಧಿ ಬಳಿಕ ಜನರ ನಾಡಿಮಿಡಿತವನ್ನು ನಿಖರವಾಗಿ ಅರಿತುಕೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು ಎಂದು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಅವರು ತಮ್ಮ ಹೊಸ ಪುಸ್ತಕದಲ್ಲಿ (New Book) ದಾಖಲಿಸಿದ್ದಾರೆ.
ಶರ್ಮಿಷ್ಠಾ ಮುಖರ್ಜಿ ಅವರು, ತಮ್ಮ ತಂದೆ ಪ್ರಣಬ್ ಜತೆ ನಡೆಸಿದ ಸಂಭಾಷಣೆ, ಅವರ ಡೈರಿ ನಮೂದುಗಳನ್ನು ಒಳಗೊಂಡಿರುವ ಪ್ರಣಬ್, ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ ಎಂಬ ಹೊಸ ಕೃತಿಯಲ್ಲಿ ದಾಖಲಿಸಿದ್ದಾರೆ. ಸಿಯಾಚಿನ್‌ನಲ್ಲಿ ಸೈನಿಕರು ಮತ್ತು ಶ್ರೀನಗರದಲ್ಲಿ ಪ್ರವಾಹ ಪೀಡಿತ ಜನರೊಂದಿಗೆ ದೀಪಾವಳಿಯನ್ನು ಕಳೆಯುವ ಪ್ರಧಾನಿಯ ನಿರ್ಧಾರವು ಇಂದಿರಾ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಧಾನಿಗಳಲ್ಲಿ ಗೋಚರಿಸದ ಅವರ ರಾಜಕೀಯ ಪ್ರಜ್ಞೆಯಾಗಿದೆ ಎಂದು ಪ್ರಣಬ್ ಅವರು 2014 ಅಕ್ಟೋಬರ್ 13ರಂದು ನಮೂದಿಸಿದ್ದರು.
ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನಾನು ನೀಡುವ ಸಲಹೆಯು ಅವರಿಗೆ ಮೌಲ್ಯಯುತವಾಗಿರುತ್ತದೆ ಎಂದು ಮೋದಿ ಹೇಳಿದ್ದರು. ನನ್ನಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಹೇಳಿದ್ದರು. ಮೋದಿ ಬಗ್ಗೆ ಸಾಕಷ್ಟು ಸ್ಪಷ್ಟತೆ ಇತ್ತು. ಮೋದಿ ತಮ್ಮ ವಿಚಾರಗಳಲ್ಲಿ ಸ್ಪಷ್ಟತೆಯನ್ನುಹೊಂದಿದ್ದರು. ರಾಜಕಾರಣಕ್ಕೆ ವೃತ್ತಿಪರತೆಯನ್ನು ಅವರು ತಂದರು. ಜನರ ನಾಡಿ ಮಿಡಿತವನ್ನು ನಿಖರವಾಗಿ ಅಳೆಯುತ್ತಿದ್ದರು. ಅವರಿಗೆ ಕಲಿಯುವ ಗುಣ ಇತ್ತು. ತಮಗೇ ಎಲ್ಲ ಗೊತ್ತು ಎನ್ನುವ ರೀತಿಯಲ್ಲಿ ವರ್ತಿಸುತ್ತಿರಲಿಲ್ಲ. ಮೋದಿ ಕಟ್ಟರ್ ಆರೆಸ್ಸೆಸ್ ಮನುಷ್ಯ ಮತ್ತು ದೇಶಭಕ್ತ ಹಾಗೂ ರಾಷ್ಟ್ರೀಯವಾದಿ ಎಂದು ಅವರ ಅಭಿಪ್ರಾಯಗಳನ್ನು ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೊಸ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.