April 5, 2026
Sunday, April 5, 2026
spot_img

‘ಧುರಂಧರ್’ ಅಬ್ಬರಕ್ಕೆ ಮೋದಿ ಸಾಥ್: ‘ಪ್ರೊಪಗಾಂಡ’ ಸಿನಿಮಾ ಎಂದವರಿಗೆ ಪ್ರಧಾನಿ ಕೊಟ್ಟ ಉತ್ತರವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಹೊಸ ದಾಖಲೆ ಬರೆದಿವೆ. ಆದರೆ, ಈ ಸಿನಿಮಾಗಳ ಯಶಸ್ಸಿನ ಜೊತೆಜೊತೆಗೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಹಲವು ವಿಮರ್ಶಕರು ಈ ಚಿತ್ರಗಳನ್ನು ‘ಪ್ರೊಪಗಾಂಡ’ ಎಂದು ಟೀಕಿಸುತ್ತಿದ್ದಾರೆ.

ಈ ವಿವಾದದ ಬೆನ್ನಲ್ಲೇ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಿನಿಮಾಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಧುರಂಧರ್’, ‘ದಿ ಕೇರಳ ಸ್ಟೋರಿ’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳನ್ನು ಸಮರ್ಥಿಸಿಕೊಂಡಿದ್ದಾರೆ.

“ಸಿನಿಮಾಗಳ ಮೂಲಕ ಸತ್ಯವನ್ನು ಹೊರಹಾಕಿದಾಗಲೆಲ್ಲ ಅದನ್ನು ಸುಳ್ಳು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ಈಗ ‘ಧುರಂಧರ್’ ಸಿನಿಮಾಗಳ ಬಗ್ಗೆಯೂ ಇದೇ ರೀತಿ ಸುಳ್ಳು ಹಬ್ಬಿಸಲಾಗುತ್ತಿದೆ. ಎಫ್‌ಸಿಆರ್ಎ (FCRA) ಕಾಯ್ದೆ ಮತ್ತು ಯುಸಿಸಿ ವಿಚಾರದಲ್ಲೂ ಕೆಲವರು ಸುಳ್ಳು ಮಾಹಿತಿಯನ್ನೇ ಹರಡುತ್ತಿದ್ದಾರೆ,” ಎಂದು ಮೋದಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !