ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಡಾಗ್ಸ್’ ಹಾಡಿನ ಮೂಲಕ ಖ್ಯಾತಿ ಪಡೆದ ರ‍್ಯಾಪರ್ ಹನುಮಾನ್‌ಕೈಂಡ್ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 120 ನೇ ಸಂಚಿಕೆಯಲ್ಲಿ ರ‍್ಯಾಪರ್ ಹನುಮಾನ್‌ಕೈಂಡ್ ಅವರ ‘ರನ್ ಇಟ್ ಅಪ್’ ಹಾಡನ್ನು ಉಲ್ಲೇಖಿಸಿದ್ದಾರೆ.
ರೇಡಿಯೋ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿ, “ನಮ್ಮ ಸ್ಥಳೀಯ ಕ್ರೀಡೆಗಳು ಈಗ ಜನಪ್ರಿಯವಾಗುತ್ತಿವೆ. ನೀವೆಲ್ಲರೂ ಪ್ರಸಿದ್ಧ ರ‍್ಯಾಪರ್ ಹನುಮಾನ್‌ಕೈಂಡ್ ರನ್ನು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ ಅವರ ಹೊಸ ಹಾಡು ‘ರನ್ ಇಟ್ ಅಪ್’ ಬಹಳ ಪ್ರಸಿದ್ಧವಾಗುತ್ತಿದೆ. ಇದರಲ್ಲಿ ನಮ್ಮ ಸಾಂಪ್ರದಾಯಿಕ ಸಮರ ಕಲೆಗಳಾದ ಕಲರಿಪಯಟ್ಟು, ಗಟ್ಕಾ ಮತ್ತು ತಂಗ್-ತಾ ಸೇರಿವೆ” ಎಂದು ಹೇಳಿದರು.
ಹನುಮಾನ್‌ಕೈಂಡ್ ಯಾರು?
ಹನುಮಾನ್‌ಕೈಂಡ್ ನಿಜವಾದ ಹೆಸರು ಸೂರಜ್ ಚೆರುಕಟ್. ಕೇರಳದ ಮಲಪ್ಪುರಂನಲ್ಲಿ 1992 ರ ಅಕ್ಟೋಬರ್ 17 ರಂದು ಜನಿಸಿದ ಸೂರಜ್, ಭಾರತ, ಇಟಲಿ, ನೈಜೀರಿಯಾ, ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ. ಮಾಹಿತಿಯ ಪ್ರಕಾರ, ಅವರು ಕೇವಲ 15 ನೇ ವಯಸ್ಸಿನಲ್ಲಿ ತಮ್ಮ ಸ್ನೇಹಿತರೊಂದಿಗೆ ರ‍್ಯಾಪ್ ಮಾಡಲು ಪ್ರಾರಂಭಿಸಿದ್ದರು.