ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಕಾಯ್ದೆಗೆ ಸಹಿ ಹಾಕಿದ್ದಾರೆ.
ಕಿಸಾನ್ ಸಮ್ಮನ್ ನಿಧಿಯ 17 ನೇ ಕಂತಿನ ಬಿಡುಗಡೆಯನ್ನು ಅನುಮೋದಿಸುವ ತಮ್ಮ ಮೊದಲ ದಾಖಲೆಗೆ ಮೋದಿ ಸಹಿ ಹಾಕಿದರು.
9.3 ಕೋಟಿ ರೈತರಿಗೆ ಹಣ ಸಿಗಲಿದೆ. ಮೋದಿ ಅವರು ಒಟ್ಟು 20 ಸಾವಿರ ಕೋಟಿ ರೂ. ಹಣ ಹಂಚಿಕೆ ಅರ್ಜಿಗೆ ಸಹಿ ಹಾಕಿದ್ದಾರೆ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂ. ವರ್ಷಕ್ಕೆ 6 ಸಾವಿರ ರೂ. ನಿಧಿಯ ಮೂಲಕ ರೈತರ ಖಾತೆಗೆ ಹಣ ಜಮೆಯಾಗಲಿದೆ.