ಮೋದಿ ಸರ್​ನೇಮ್ ಕೇಸ್: ಜಾರ್ಖಂಡ್​ ಕೋರ್ಟ್​ನಲ್ಲೂ ರಾಹುಲ್ ಗಾಂಧಿ ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೋದಿ ಸರ್​ನೇಮ್​ಗೆ ಅವಮಾನ ಮಾಡಿದ್ದ ಕೇಸ್ (Modi Sirname Case)​​ನಲ್ಲಿ ರಾಹುಲ್​ ಗಾಂಧಿಯವರಿಗೆ ಜಾರ್ಖಂಡ್​ ಕೋರ್ಟ್​ನಲ್ಲೂ ಹಿನ್ನಡೆಯಾಗಿದೆ.

2019ರಲ್ಲಿ ರಾಹುಲ್ ಗಾಂಧಿಯವರು ಮೋದಿ ಉಪನಾಮಕ್ಕೆ ಮಾಡಿದ ಹೇಳಿಕೆ ವಿರುದ್ಧ ರಾಂಚಿಯ ವಕೀಲ ಪ್ರದೀಪ್ ಮೋದಿ ಎಂಬುವರು ಜಾರ್ಖಂಡ್ ಕೋರ್ಟ್ ಮೆಟ್ಟಿಲೇರಿದ್ದರು. ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರದೀಪ್​ ಮೋದಿಯವರು ಹಾಕಿರುವ ಕೇಸ್​​ ವಿಚಾರಣೆಗೆ ತಾವು ವೈಯಕ್ತಿಕವಾಗಿ ಹಾಜರು ಕೊಡುವುದು ಕಷ್ಟವಾಗಿದೆ. ಹೀಗಾಗಿ ಇದರಿಂದ ವಿನಾಯಿತಿ ಕೊಡಬೇಕು ಎಂದು ಎಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ ಕೋರ್ಟ್ ತಿರಸ್ಕರಿಸಿದೆ.

ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಆಗಿರುತ್ತಾರೆ ಎಂದು ರಾಹುಲ್ ಗಾಂಧಿ (Rahul Gandhi)ಯವರು 2019ರಲ್ಲಿ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್​ ಮೋದಿಯವರು, ಸೂರತ್ ಕೋರ್ಟ್​ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Defamation Case) ಹೂಡಿದ್ದರು. ಅದರಲ್ಲಿ ರಾಹುಲ್ ಗಾಂಧಿಯವರು ದೋಷಿ ಎಂದು ಪರಿಗಣಿತರಾಗಿ 2ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆ ಶಿಕ್ಷೆಗೆ ತಡೆ ನೀಡಬೇಕು ಎಂದು ಸೂರತ್​ ಸೆಷನ್ಸ್​ ಕೋರ್ಟ್, ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಿದ್ದರೂ ಅವರಿಗೆ ಅಲ್ಲೆಲ್ಲ ಸೋಲಾಗಿದೆ. ಗುಜರಾತ್​ ಹೈಕೋರ್ಟ್ ರಾಹುಲ್ ಗಾಂಧಿಗೆ ಮಧ್ಯಂತರ ರಕ್ಷಣೆಯನ್ನೂ ನೀಡದೆ, ವಿಚಾರಣೆಯನ್ನು ಜೂನ್​ ತಿಂಗಳಿಗೆ ಮುಂದೂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!