ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರದ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ಮೋದಿ ನೇಪಾಳ ಪ್ರಧಾನಿಗೆ ಆಹ್ವಾನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬುಧವಾರ ಸಂಜೆ ಇಬ್ಬರು ನಾಯಕರ ನಡುವೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ನೇಪಾಳ ಪ್ರಧಾನಿಗೆ ಆಹ್ವಾನ ನಿಡಲಾಗಿದೆ. ನೇಪಾಳ ಪ್ರಧಾನಿ ಕೂಡ ಹಾಜರಾತಿಯನ್ನು ದೃಢಪಡಿಸಿದರು. ಔಪಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ನಾಳೆ ಢಾಕಾದಿಂದ ಶೇಖ್ ಹಸೀನಾ ಅವರು ಮಧ್ಯಾಹ್ನ ನಿಗದಿತ ವಿಶೇಷ ವಿಮಾನದಲ್ಲಿ ಢಾಕಾದಿಂದ ಹೊರಡಲಿದ್ದಾರೆ ಮತ್ತು ಜೂನ್ 9 ರ ಮಧ್ಯಾಹ್ನದವರೆಗೆ ರಾಷ್ಟ್ರ ರಾಜಧಾನಿಯಲ್ಲಿಯೇ ಇರುತ್ತಾರೆ. ಎಂದು ಮಾಹಿತಿ ಲಭಿಸಿದೆ.