ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಗೆ ಅವಕಾಶ ನೀಡಿದರೆ ಪಾಕಿಸ್ತಾನ ನೆಲ ಕಚ್ಚಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಪಂಜಾಬ್‌ನ ಅದಮ್‌ಪುರ ವಾಯುನೆಲೆಯಲ್ಲಿ ವಾಯುಪಡೆಯ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಮೋದಿ, “ಭಾರತ ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತದೆ, ಆದರೆ ದಾಳಿ ನಡೆದರೆ ಅದನ್ನು ನೆಲ ಕಚ್ಚುವಂತೆ ಮಾಡಲು ನಾವು ಯಾವಾಗಲೂ ಸಿದ್ಧವಾಗಿದ್ದೇವೆ” ಎಂದು ಎಚ್ಚರಿಸಿದ್ದಾರೆ.
“ನಾವು ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು. ಶತ್ರುಗಳು ಹೊಸ ಭಾರತದೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ನಾವು ನೆನಪಿಸುತ್ತಲೇ ಇರಬೇಕು” ಎಂದು ಮೋದಿ ಹೇಳಿದರು.
“ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಪಾಕಿಸ್ತಾನದಲ್ಲಿ ಯಾವುದೇ ಸ್ಥಳವಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ‘ಹಮ್ ಘರ್ ಮೇ ಘುಸ್ ಕೆ ಮಾರೆಂಗೆ'” ಎಂದು ಮೋದಿ ಪ್ರತಿಪಾದಿಸಿದ್ದಾರೆ.