ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಕಿರುತೆರೆಯಿಂದ ಬೆಳ್ಳಿತೆರೆಗೆ ಜಂಪಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಮೋಕ್ಷಿತಾ ಪೈ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೋಕ್ಷಿತಾ ಪೈ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂಜನಾದ್ರಿ ಪ್ರೊಡಕ್ಷನ್ಸ್ ಫಸ್ಟ್ ಪ್ರಾಜೆಕ್ಟ್ ಅಡಿಯಲ್ಲಿ ಮೋಕ್ಷಿತಾ ಪೈ ಅಭಿನಯದ ಸಿನಿಮಾದ ಹೆಸರು ಅನೌನ್ಸ್ ಮಾಡುವ ತವಕದಲ್ಲಿದ್ದಾರೆ.

ಇನ್ನೂ, ಇದೇ ವಿಚಾರದ ಬಗ್ಗೆ ನಟಿ ಮೋಕ್ಷಿತಾ ಪೈ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ​ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಂಜನಾದ್ರಿ ಪ್ರೊಡಕ್ಷನ್ ಮೊದಲ ಪ್ರಾಜೆಕ್ಟ್ #MCR ನಿಂದ ನಾಳೆ ಸಂಜೆ 6:00 ಗಂಟೆಗೆ ಶೀರ್ಷಿಕೆಯನ್ನು ಪ್ರಾರಂಭಿಸಲು ನಮಗೆ ತುಂಬಾ ಸಂತೋಷವಾಗಿದೆ . ಜಯರಾಂ ಗಂಗಪ್ಪನಹಳ್ಳಿ ನಿರ್ಮಾಣ ಹಾಗೂ ಧನುಷ್ ಗೌಡ ವಿ ಅವರ ನಿರ್ದೇಶನ ಎಂದು ಬರೆದುಕೊಂಡಿದ್ದಾರೆ.

ಅಂದರೆ ನಾಳೆ ಸಂಜೆ 6:00 ಗಂಟೆಗೆ ಮೋಕ್ಷಿತಾ ಪೈ ನಟಿಸುತ್ತಿರೋ ಮೊದಲ ಸಿನಿಮಾದ ಹೆಸರನ್ನು ಅನೌನ್ಸ್​ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here