ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತನ್ನು ಬೆಚ್ಚಿಬೀಳಿಸಿರುವ ಮಂಕಿಪಾಕ್ಸ್ ಕೋವಿಡ್ ಮಾದರಿಯಲ್ಲಿ ರೋಗಲಕ್ಷಣವೇ ಇಲ್ಲದೆ ಹರಡಲು ಆರಂಭಿಸಿದೆಯೇ? ಹೀಗೊಂದು ಅನುಮಾನವನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಸೋಂಕು ಪತ್ತೆಯಾದ ಮೂರು ಯುವಕರಲ್ಲಿ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ.
ವೈರಸ್ ಮನುಷ್ಯನ ದೇಹವನ್ನು ಹೊಕ್ಕರೆ 5 ರಿಂದ 21 ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಏಳುವುದು, ಜ್ವರ ಹೀಗೆ ಇನ್ನಿತರ ರೋಗಗಳು ಬರುತ್ತವೆ. ಆದರೆ ಇವರಲ್ಲಿ ಯಾವುದೇ ಲಕ್ಷಣ ಕೂಡ ಕಂಡುಬಂದಿಲ್ಲ. ಹೀಗಾಗಿ ಸೋಂಕು ರೋಗ ಲಕ್ಷಣ ಇಲ್ಲದೇ ಹರಡುತ್ತಿದೆ ಎಂದು ಅಧ್ಯಯನಗಳು ಎಚ್ಚರಿಸಿವೆ.