ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮುಂಗಾರುಮಳೆ’ ನಟಿ ಪೂಜಾ ಗಾಂಧಿ (Pooja Gandhi) ಅವರು ಬಹುಕಾಲದ ಗೆಳೆಯ ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ 10 ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಸ್ನೇಹಿತರಾಗಿದ್ದರು.ಈ ಪರಿಚಯವೇ ಪ್ರೇಮಕ್ಕೆ ಮುನ್ನುಡಿ ಬರೆದಿದೆ. ಯಲಹಂಕದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪೂಜಾ ಗಾಂಧಿ ಇಂದು (ನ.29) ಮದುವೆಯಾಗಿದ್ದಾರೆ.
ಪೂಜಾ ಗಾಂಧಿ ಬಿಳಿ ಸೀರೆಯಲ್ಲಿ ಮಿಂಚಿದ್ರೆ, ವಿಜಯ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಯೋಗರಾಜ್ ಭಟ್, ಸುಧಾರಾಣಿ, ಶುಭ ಪೂಂಜಾ, ಸುಮನಾ ಕಿತ್ತೂರು, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಶುಭ ಕೋರಿದ್ದಾರೆ.